ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌

ಬಿಗ್ ಬಾಸ್ ಕನ್ನಡ 11ಕ್ಕೆ (Bigg Boss Kannada 11) ಅದ್ಧೂರಿಯಾಗಿ ಇಂದು ಚಾಲನೆ ಸಿಕ್ಕಿದೆ. ದೊಡ್ಮನೆಗೆ 5ನೇ ಸ್ವರ್ಧಿಯಾಗಿ ಅನುಷಾ ರೈ (Anusha Rai) ಎಂಟ್ರಿ ಕೊಟ್ಟಿದ್ರೆ, 6ನೇ ಸ್ವರ್ಧಿಯಾಗಿ ಧರ್ಮ ಕೀರ್ತಿರಾಜ್ (Dharma Keerthi Raj) ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ನೇ ಟ್ರೋಲ್ ಮಾಡಿದ್ದ ಧನರಾಜ್ ದೊಡ್ಮನೆ ಸ್ವರ್ಗಕ್ಕೆ ಎಂಟ್ರಿ

ದೊಡ್ಮನೆಯ ಗ್ರ‍್ಯಾಂಡ್ ಓಪನಿಂಗ್‌ನಲ್ಲಿ ಅನುಷಾ ರೈ ಅವರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಖುಷಿ ಹಾಗೂ ಡಬಲ್ ಶಾಕ್ ಸಿಕ್ಕಿದೆ. ಅನುಷಾ ರೈ ಅವರು ಎಂಟ್ರಿ ಕೊಟ್ಟಾದ ಮೇಲೆ ಕಣ್ಣಿಗೆ ಪಟ್ಟಿ ಕಟ್ಟಿಸಿ 6ನೇ ಕಂಟೆಸ್ಟೆಂಟ್ ಅನ್ನು ಕರೆಸಲಾಗಿದೆ. ಇಲ್ಲೂ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ.

‘ಬಿಗ್ ಬಾಸ್ ಸೀಸನ್ 11’ರ 6ನೇ ಸ್ಪರ್ಧಿಯಾಗಿ ‘ನವಗ್ರಹ’ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಅವರು ಎಂಟ್ರಿ ಕೊಟ್ಟಿದ್ದಾರೆ. 5ನೇ ಸ್ಪರ್ಧಿ ಅನುಷಾ ಅವರಿಗೆ ಧರ್ಮ ಅವರ ಹೆಸರನ್ನು ಗೆಸ್ ಮಾಡೋ ಟಾಸ್ಕ್ ನೀಡಲಾಗಿದ್ದು, ಕಿಚ್ಚ ಸುದೀಪ್ ಸುಳಿವು ನೀಡುತ್ತಿದ್ದಂತೆ ಅನುಷಾ ರೈ, ಧರ್ಮ ಅವರ ಹೆಸರು ಸರಿಯಾಗಿ ಗೆಸ್‌ ಮಾಡಿದ್ದಾರೆ.

ಅನುಷಾ ರೈ ಹಾಗೂ ಧರ್ಮ ಅವರ ಮೊದಲೇ ಸ್ನೇಹಿತರು. ಇದೀಗ ಈ ಬೆಸ್ಟ್ ಫ್ರೆಂಡ್ಸ್ ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಿದ್ದಾರೆ. ಈ ಹಿಂದೆ ಇಬ್ಬರೂ ‘ಖಡಕ್’ ಎಂಬ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಟ್ವಿಸ್ಟ್ ನೀಡಲಾಗಿದೆ. ಅನುಷಾ ರೈ ಅವರು ನಾನು ಮೊದಲು ಸ್ವರ್ಗಕ್ಕೆ ಹೋಗಬೇಕು ಎಂದಿದ್ದರು. ಆದರೆ ವಿಶೇಷ ಅಧಿಕಾರ ಹೊಂದಿದ್ದ ಭವ್ಯಾ ಗೌಡ ಹಾಗೂ ಯಮುನಾ ಅವರ ನಿರ್ಧಾರದ ಮೇಲೆ ಅನುಷಾ ರೈ ಅವರು ನರಕಕ್ಕೆ ಹೋಗಿದ್ದಾರೆ. ಧರ್ಮ ಕೀರ್ತಿ ರಾಜ್ ಸ್ವರ್ಗಕ್ಕೆ ಕಾಲಿಟಿದ್ದಾರೆ.