ಕೊಲೆಗಾರ ಯಾರೆಂದು ಗೊತ್ತಾಗಿದೆ, ಶೀಘ್ರದಲ್ಲೇ ಬಂಧಿಸಲಾಗುವುದು: ಮಹಿಳೆ ಕೊಲೆ ಬಗ್ಗೆ ಪೊಲೀಸ್ ಆಯುಕ್ತರ ಮಾಹಿತಿ

ಬೆಂಗಳೂರು: ವೈಯಾಲಿಕಾವಲ್ (VYalikaval) ಮಹಾಲಕ್ಷ್ಮಿ ಕೊಲೆಗಾರ ಯಾರೆಂದು ಗೊತ್ತಾಗಿದೆ, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಹೇಳಿಕೆ ನೀಡಿದ್ದಾರೆ.

ಘಟನೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೃತ್ಯವೆಸಗಿರುವ ವ್ಯಕಿ ಯಾರೆಂದು ತಿಳಿದು ಬಂದಿದೆ. ಆರೋಪಿ ಹೊರ ರಾಜ್ಯದವನಾಗಿದ್ದು ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದ. ಶೀಘ್ರದಲ್ಲಿ ಆತನನ್ನು ಬಂಧನ ಮಾಡಿ ವಿಚಾರಣೆಗೆ ಒಳಪಡಿಸುತ್ತೇವೆ. ನಂತರ ಉಳಿದ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು. ಇದನ್ನೂ ಓದಿ:  ವೈಯಾಲಿಕಾವಲ್ ಮಹಿಳೆ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸಲೂನ್ ಬಾಯ್ ಅಶ್ರಫ್ ಹೇಳಿದ್ದೇನು?

ದರ್ಶನ್ (Darshan) ವಿರುದ್ಧ ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗೆ ಮನವಿ ವಿಚಾರವಾಗಿ ಮಾತನಾಡಿ, ಇದು ಇನ್ನೂ ಸರ್ಕಾರದ ಹಂತದಲ್ಲಿ ಇದೆ. ಫಾಸ್ಟ್‌ಟ್ರ್ಯಾಕ್ ಕೋರ್ಟ್ ಮಾಡುವ ಬಗ್ಗೆ ನಮಗೆ ಇನ್ನೂ ಮಾಹಿತಿ ಬಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮೈದಾನದ ಗೇಟ್‌ ಮುರಿದು ಬಿದ್ದು ಬಾಲಕ ಸಾವು – ಪೋಷಕರಿಂದ ಪುತ್ರನ ನೇತ್ರದಾನ

ಇನ್ನು ಬೆಂಗಳೂರಿನಲ್ಲಿ ಗಣೇಶ ಮೆರವಣಿಗೆ ವಿಸರ್ಜನೆ ಸಂಬಂಧ ಯಾವುದೇ ಗಲಾಟೆಗಳು ವರದಿಯಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರು| ಕಾರು-ಬೈಕ್ ನಡುವೆ ಭೀಕರ ಅಪಘಾತ – 5 ವರ್ಷದ ಕಂದಮ್ಮ ಸಾವು