ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪೆಟ್ಟಾ’ ಚಿತ್ರದ ನಟಿ ಮೇಘಾ

ಮಿಳಿನ ‘ಪೆಟ್ಟಾ’ (Petta) ಖ್ಯಾತಿಯ ಮೇಘಾ ಆಕಾಶ್ (Megha Akash) ಅವರು ಇಂದು (ಸೆ.15) ಬಹುಕಾಲದ ಗೆಳೆಯ ಸಾಯಿ ವಿಷ್ಣು ಜೊತೆ ಮದುವೆಯಾಗಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ರವಿಕೆ ಧರಿಸದೆ ಸೀರೆಯುಟ್ಟ ಚೈತ್ರಾ ಆಚಾರ್

ಚೆನ್ನೈನಲ್ಲಿ ಸಾಯಿ ವಿಷ್ಣು (Saai Vishnu) ಜೊತೆ ಅದ್ಧೂರಿಯಾಗಿ ಮೇಘಾ ಮದುವೆಯಾದರು. 6 ವರ್ಷಗಳು ಪ್ರೀತಿಗೆ ಮದುವೆಯ (Wedding) ಮುದ್ರೆ ಒತ್ತಿದ್ದರು. ಈ ಮದುವೆಗೆ ಕುಟುಂಬಸ್ಥರು, ಸ್ಟಾರ್ ಕಲಾವಿದರಿಗೆ, ಆಪ್ತರಿಗೆ ಆಹ್ವಾನ ನೀಡಲಾಗಿತ್ತು.

 

View this post on Instagram

 

A post shared by Megha Akash (@meghaakash)

ಇನ್ನೂ ರಾಜಕೀಯ ಹಿನ್ನೆಲೆಯಿಂದ ಬಂದಿರುವ ಸಾಯಿ ವಿಷ್ಣು ಜೋಡಿಯ ಆರತಕ್ಷತೆಗೆ ತಮಿಳುನಾಡಿನ ಸಿಎಂ ಸ್ಟಾಲಿನ್ ಕೂಡ ಭಾಗವಹಿಸಿದ್ದರು. ಹೊಸ ಜೋಡಿಗೆ ಆಶೀರ್ವಾದ ಮಾಡಿದರು.

ಅಂದಹಾಗೆ, ಪೆಟ್ಟಾ, ಕುಟ್ಟಿ ಸ್ಟೋರಿ, ರಾಧೆ, ಡಿಯರ್ ಮೇಘಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.