ಪತ್ನಿಯ ಶೀಲ ಶಂಕಿಸಿ ಕೊಲೆ – ಸಂಬಂಧಿಕರ ಜೊತೆ ಸೇರಿ ಮೃತದೇಹ ಸುಟ್ಟುಹಾಕಿದ ಪತಿ

ಕೊಪ್ಪಳ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ, ಕೊಲೆ ಮಾಡಿ ಆಕೆಯನ್ನು ಸುಟ್ಟುಹಾಕಿರುವ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ.

ಕುಕನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ಗೀತಾ ಎಂಬಾಕೆಯ ಕೊಲೆಯಾಗಿದೆ. ಪತಿ ದೇವರೆಡ್ಡೆಪ್ಪ ಭಾವಿಕಟ್ಟಿಯಿಂದ ಆಕೆ ಕೊಲೆಯಾಗಿದ್ದಾಳೆ. ಇದನ್ನೂ ಓದಿ: ಸಾವಿನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿ ಎಸ್ಕೇಪ್ ಆಗಿದ್ದ ಸಂಬಂಧಿಕರು ಅರೆಸ್ಟ್

ಸೆ.6 ರ ರಾತ್ರಿ ಕೊಲೆ ನಡೆದಿದೆ. ಮೃತಳ ಸಹೋದರ ಸಿದ್ಧರೆಡ್ಡಿ ದೂರು ಆಧರಿಸಿ, ಕೊಲೆ ಆರೋಪದಡಿ ದೇವರೆಡ್ಡೆಪ್ಪ ಭಾವಿಕಟ್ಟಿ ಹಾಗೂ ಆತನ ತಂದೆ ಮಲ್ಲಾರೆಡ್ಡೆಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಮಕ್ಕಳಾಗದ ಹಿನ್ನೆಲೆಯಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೃತಳ ಕುಟುಂಬಕ್ಕೆ ಸಹಜ ಸಾವು ಎಂದು ಹೇಳಿ, ತರಾತುರಿಯಲ್ಲಿ ಸುಟ್ಟು ಹಾಕಿದ್ದಾರೆ. ಸಂಶಯಗೊಂಡ ಮೃತಳ ಸಹೋದರ ಸಿದ್ಧರೆಡ್ಡಿ ದೂರು ನೀಡಿದ್ದು, ಕುಕನೂರು ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ- 17ರ ಬಾಲಕ ಸಾವು