ಇಂದು ದರ್ಶನ್‌ಗೆ ಸಿಗಲಿದೆ 90 ಗ್ರಾಂ ಮಟನ್

ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ ವಿವಾದದ ಹಿನ್ನೆಲೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಆರೋಪಿ ದರ್ಶನ್‌ಗೆ (Darshan) ಇಂದು (ಆ.30) ಮಾಂಸದೂಟ ನೀಡಲಿದ್ದಾರೆ. ಇದನ್ನೂ ಓದಿ:Toxic: ಯಶ್ ಚಿತ್ರದಲ್ಲಿ 7.8 ಅಡಿ ಎತ್ತರದ ನಟ ಸುನೀಲ್ ಕುಮಾರ್ ಎಂಟ್ರಿ

ಬಳ್ಳಾರಿ ಸೆಂಟ್ರಲ್ ಜೈಲಲ್ಲಿ ಎರಡನೇ ಶುಕ್ರವಾರ ಮತ್ತು ಕೊನೆಯ ಶುಕ್ರವಾರ ಖೈದಿಗಳಿಗೆ ಮಟನ್ ಊಟ ನೀಡಲಾಗುತ್ತದೆ. ಜೊತೆಗೆ ತಿಂಗಳ ಮೊದಲ ಶುಕ್ರವಾರ ಮತ್ತು 3ನೇ ಶುಕ್ರವಾರ ಚಿಕನ್ ನೀಡಲಾಗುತ್ತದೆ. ಅದರಂತೆ ದರ್ಶನ್‌ಗೂ ಕೂಡ ಇಂದು (ಆ.30) ರಾತ್ರಿ 90 ಗ್ರಾಂ ಮಟನ್ ಊಟ ಕೊಡಲಿದ್ದಾರೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್ ಮತ್ತು ಗ್ಯಾಂಗ್‌ಗೆ ಸೆಪ್ಟೆಂಬರ್ 9ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಗುರುವಾರ ಆದೇಶ ಪ್ರಕಟಿಸಿತ್ತು. ಈ ಆದೇಶದ ನಂತರ ದರ್ಶನ್ ಅವರನ್ನು ಆ.29ರ ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ಪೊಲೀಸ್ ವ್ಯಾನ್‌ನಲ್ಲಿ ಬಳ್ಳಾರಿ ಜೈಲಿಗೆ ಕರೆ ತರಲಾಗಿದೆ.