ಕಾರಣಾಂತರಗಳಿಂದ ಹುಟ್ಟುಹಬ್ಬ ಆಚರಿಸಲಾಗುತ್ತಿಲ್ಲ: ಫ್ಯಾನ್ಸ್‌ಗೆ ಡಾಲಿ ಮನವಿ

ಸ್ಯಾಂಡಲ್‌ವುಡ್ ನಟ ರಾಕ್ಷಸ ಡಾಲಿ ಧನಂಜಯ (Daali Dhananjay) ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ. ಈ ವರ್ಷದ ಹುಟ್ಟುಹಬ್ಬದ (Birthday) ಆಚರಣೆಗೆ ಡಾಲಿ ಬ್ರೇಕ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದಲ್ಲಿ ನಟ ಜಗ್ಗೇಶ್

ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ಆ.23, ಪ್ರತಿ ವರ್ಷದಂತೆ ನಿಮ್ಮೊಡನೆ ಹುಟ್ಟು ಹಬ್ಬವನ್ನು ಸಂಭ್ರಮಿಸುವ ಉತ್ಸಾಹವಿದ್ದರು, ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ. ಕ್ಷಮೆಯಿರಲಿ. ಎಲ್ಲಿರುತ್ತಿರೋ ಅಲ್ಲಿಂದಲೇ ಹರಸಿ. ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆಯ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ. ಪ್ರೀತಿಯಿರಲಿ. ನಿಮ್ಮ ಡಾಲಿ ಧನಂಜಯ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ, ‘ಕೋಟಿ’ (Kotee) ಸಿನಿಮಾದ ಬಳಿಕ ಶಿವಣ್ಣ ಜೊತೆ ಉತ್ತರಾಕಾಂಡ, ನಾಡಪ್ರಭು ಕೆಂಪೇಗೌಡ, ‘ಬಡವ ರಾಸ್ಕಲ್’ ಡೈರೆಕ್ಟರ್ ಶಂಕರ್ ಗುರು ಜೊತೆ ಹೊಸ ಚಿತ್ರವನ್ನು ಡಾಲಿ ಒಪ್ಪಿಕೊಂಡಿದ್ದಾರೆ. ಜೊತೆಗೆ ‘ಪುಷ್ಪ 2’ (Pushpa 2) ಸಿನಿಮಾ ಸೇರಿದಂತೆ ಪರಭಾಷೆಯ ಪ್ರಾಜೆಕ್ಟ್‌ಗಳು ನಟನ ಕೈಯಲ್ಲಿವೆ.