ಬಿಎಸ್‌ವೈ ಬಂಧನಕ್ಕೆ ತಡೆ – ಹೈಕೋರ್ಟ್‌ ಆದೇಶ ತೆರವಿಗೆ ಸರ್ಕಾರ ಪ್ಲ್ಯಾನ್‌

ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಗ್ರಹಿಸುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ (Yediyurappa) ವಿರುದ್ಧದ ಪೋಕ್ಸೋ ಪ್ರಕರಣಕ್ಕೆ (Pocso Case) ಈಗ ಮತ್ತೆ ಜೀವ ಬಂದಿದೆ.

ಸಿಎಂ ವಿರುದ್ಧ ಬಿಜೆಪಿಯಿಂದ (BJP) ರಾಜೀನಾಮೆ ಒತ್ತಾಯ, ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ನಿರೀಕ್ಷೆಯ ಬೆನ್ನಲ್ಲೇ ಬಿಎಸ್‌ವೈ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಸರ್ಕಾರ ತೀವ್ರಗೊಳಿಸಿದೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂನ ಸರ್ಕಾರ ಕಂಟ್ರೋಲ್‌ ಮಾಡಲ್ಲ – ಡಿಕೆಶಿ ಸ್ಪಷ್ಟನೆ

 

ಬಿಎಸ್‌ವೈ ಬಂಧನಕ್ಕೆ ಇರುವ ಹೈಕೋರ್ಟ್ (High Court) ತಡೆಯಾಜ್ಞೆ ತೆರವಿಗೆ ಕಸರತ್ತು ನಡೆಸುತ್ತಿದೆ. ತಡೆಯಾಜ್ಞೆ ತೆರವುಗೊಳಿಸಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್‌ ಮಾಡಿದೆ.

ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಬಿಎಸ್‌ವೈ ಬಂಧನಕ್ಕೆ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕಾನೂನು ಹೋರಾಟ ನಡೆಸುವ ಸಾಧ್ಯತೆಯಿದೆ.