14 ವರ್ಷ ಸಂಸಾರ ಮಾಡಿ ಗಂಡ, ಮಗನನ್ನು ಬಿಟ್ಟು ಬೇರೊಬ್ಬನನ್ನು ಮದ್ವೆಯಾದ್ಳು!

ಬಾಗಲಕೋಟೆ: ಸಾಮಾನ್ಯವಾಗಿ ಗಂಡ ಪತ್ನಿಯನ್ನ ಬಿಟ್ಟು ಬೇರೊಂದು ಮದ್ವೆ ಅಥವಾ ಪತಿಯ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ ಅಥವಾ ತವರು ಮನೆಗೆ ಹೋಗುವಂತ ಸುದ್ದಿಯನ್ನ ನೋಡಿರ್ತಿವಿ. ಆದರೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಮಹಾತಾಯಿಯೊಬ್ಬಳು 14 ವರ್ಷ ಸಂಸಾರ ಮಾಡಿದ ಬಳಿಕ ತನ್ನ ಗಂಡ ಮತ್ತು ಮಗನನ್ನು ಬಿಟ್ಟು ಹೋಗಿದ್ದಾಳೆ.

ಸವಿತಾ ಎಂಬಾಕೆಯೇ ಈ ಮಹಾತಾಯಿ. ಈಕೆ ನಗರದಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅಶೀಕ್ ಬಾಳೆ ಎಂಬವರ ಪತ್ನಿ. ಮಾತ್ರವಲ್ಲದೇ ಇದೀಗ ಈಕೆಗೆ 12 ವರ್ಷದ ಸುಜನ್ ಎಂಬ ಮಗನೂ ಇದ್ದಾನೆ. ಗಾರ್ಮೆಂಟ್ ಕೆಲಸಕ್ಕಾಗಿ ಬೆಂಗಳೂರು ಸೇರಿದ್ದ ಸವಿತಾ ಖಾಸಿಂ ಎಂಬಾತನನ್ನು ಮದುವೆಯಾಗಿದ್ದು, ಇದರಿಂದ ಪತಿ ಅಶೋಕ್ ಹಾಗೂ ಮಗನನ್ನು ದೂರ ಮಾಡಿದ್ದಾಳೆ.

ಇದೀಗ ಅಶೋಕ್ ನನ್ನ ಹೆಂಡತಿಯನ್ನ ನನ್ನ ಜೊತೆ ಕಳುಹಿಸಿ ಕೊಡಿ ಅಂತಾ ಬಾಗಲಕೋಟೆ ಎಸ್‍ಪಿ, ಹಾಗೂ ಹೆಂಡತಿ ತವರೂರು ಬೆಳಗಾವಿ ಎಸ್‍ಪಿ ಮತ್ತು ಸಿಎಂ ಕಾರ್ಯಾಲಯಕ್ಕೂ ಪತ್ರ ಬರೆದಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮಗ ಸುಜನ್ ಕೂಡ 6ನೇ ತರಗತಿಯಲ್ಲಿ ಓದುತ್ತಿದ್ದು ಅಮ್ಮನ ಬರುವಿಕೆಗಾಗಿ ಕಾಯುತ್ತಿದ್ದಾನೆ.

 

Comments

Leave a Reply

Your email address will not be published. Required fields are marked *