ಲೀಕ್ ಆಯ್ತು ‘ಪುಷ್ಪ 2’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ದೃಶ್ಯ

ಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಇದೇ ಆಗಸ್ಟ್ 6ರಂದು ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ತಂಡ ಬ್ಯುಸಿಯಾಗಿದ್ದರೆ, ಇತ್ತ ಚಿತ್ರೀಕರಣದ ವಿಡಿಯೋಗಳು ಲೀಕ್ ಆಗಿದೆ. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾ ಶೂಟಿಂಗ್‌ನಲ್ಲಿ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಕಟ್ಟು ನಿಟ್ಟಾಗಿ ನಿಯಮ ಹೇರಿದ್ರೂ ಕೂಡ ಕೆಲವರು ಮೊಬೈಲ್ ಸೆಟ್ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಕ್ಲೈಮ್ಯಾಕ್ಸ್ ಹಂತದ ಸೀನ್‌ಗಳನ್ನು ಕದ್ದು ಚಿತ್ರೀಕರಿಸಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ರಕ್ತಸಿಕ್ತವಾದ ವ್ಯಕ್ತಿಯೊಬ್ಬ ಅಲ್ಲು ಅರ್ಜುನ್ (Allu Arjun) ಹೊಡೆಯಲು ಮುಂದಾಗುತ್ತಿರುವ ರೀತಿಯಲ್ಲಿ ಈ ವಿಡಿಯೋ ಇದೆ. ಈ ಕೆಲಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ:‘ಕ್ಯಾ ಲಫ್ಡಾ’ ಅಂತಾ ಹೆಜ್ಜೆ ಹಾಕಿದ ರಾಮ್ ಪೋತಿನೇನಿ, ಕಾವ್ಯಾ ಥಾಪರ್

‘ಪುಷ್ಪ 2’ ಚಿತ್ರವು ಇನ್ನೂ 10% ಶೂಟಿಂಗ್ ಬಾಕಿಯಿದೆ. ಬಹುಭಾಷೆಗಳಲ್ಲಿ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆ ಡಾಲಿ ಧನಂಜಯ, ನಿರೂಪಕಿ ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.