– ಮೂರು ದಿನದ ಹೆಬ್ಬುಲಿಯ ಕಲೆಕ್ಷನ್ ಎಷ್ಟು ಗೊತ್ತಾ?
ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಹೆಬ್ಬುಲಿಯ ಘರ್ಜನೆ ಜೋರಾಗಿದೆ. ಬಾಕ್ಸ್ ಆಫೀಸ್‍ನ ಹಳೆ ರೆಕಾರ್ಡ್‍ಗಳನ್ನು ನುಂಗಿ ನೀರುಕುಡಿದು ಹೊಸ ದಾಖಲೆಯತ್ತ ಹೆಜ್ಜೆ ಇಡುತ್ತಿದೆ ಹೆಬ್ಬುಲಿ. ತೆರೆಕಂಡ ಮೂರೇ ದಿನಕ್ಕೆ ಹಾಕಿದ ಬಂಡವಾಳ ಖಂಡಿತ ವಾಪಸ್ ಬರುತ್ತೆ ಎಂಬುವ ಸೂಚನೆಯನ್ನು ನೀಡಿದೆ.

ಹೆಬ್ಬುಲಿ ಚಿತ್ರದ ವಿತರಕರಾದ ಜಾಕ್ ಮಂಜುವರ ಲೆಕ್ಕಚಾರದ ಪ್ರಕಾರ ಹೆಬ್ಬುಲಿ ಮೂರೇ ದಿನಕ್ಕೆ 22ರಿಂದ 24ಕೋಟಿ ಕಲೆಕ್ಷನ್ ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಒಟ್ಟು 146 ಚಿತ್ರಮಂದಿರಗಳ ಕಡೆಯಿಂದ 20 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಬೆಂಗಳೂರು ಮತ್ತು ಮೈಸೂರಿನ 28 ಮಲ್ಟಿಪ್ಲೆಕ್ಸ್ ಥಿಯೇಟರ್‍ಗಳಲ್ಲಿ ಸುಮಾರು 1ಕೋಟಿ ಸಂಪಾದನೆ ಮಾಡಿದೆ. ಇನ್ನುಳಿದಂತೆ ಹೊರರಾಜ್ಯದ 30 ಥಿಯೇಟರ್‍ಗಳಿಂದ ಅಂದಾಜು ಒಂದು ಕೋಟಿ ಗಳಿಸಿದೆ. ಒಟ್ಟಿನಲ್ಲಿ 22ರಿಂದ 24ಕೋಟಿ ಕಲೆಕ್ಷನ್ ಆಗಿದೆ ಎಂದು ಜಾಕ್ ಮಂಜು ಹೇಳಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತವಾಗಿ ಫೆಬ್ರವರಿ 23ಕ್ಕೆ ಹೆಬ್ಬುಲಿ ಸಿನಿಮಾ ದೇಶದ್ಯಾಂತ ತೆರೆಕಂಡಿತು. ರಿಲೀಸ್ ವಿಚಾರದಲ್ಲಿಯೇ ನೂತನ ದಾಖಲೆಗೆ ನಾಂದಿ ಹಾಡಿತ್ತು. ಬರೊಬ್ಬರಿ 425ಕ್ಕೂ ಹೆಚ್ಚು ಬೆಳ್ಳಿಪರದೆಯಲ್ಲಿ ಪ್ರದರ್ಶನ ಕಾಣುತ್ತಿರುವ ಮೊದಲ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈಗ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ ಎನ್ನುತ್ತಿದ್ದವರಿಗೆ ಆಶ್ಚರ್ಯಪಡುವಂತೆ ಮಾಡುತ್ತಿದೆ..
ಈ ಎಲ್ಲಾ ಲೆಕ್ಕಾಚಾರನ್ನ ನೋಡುತ್ತಿದ್ರೆ ರಕ್ಷಿತ್ ಶೆಟ್ಟಿ ಕೆಲ ದಿನಗಳ ಹಿಂದೆ ಕನ್ನಡದಲ್ಲಿ ನೂರು ಕೋಟಿ ಕ್ಲಬ್ ಸೇರುವ ಮೊದಲ ಸಿನಿಮಾ ಹೆಬ್ಬುಲಿ ಎಂದು ಟ್ವೀಟ್ ಮಾಡಿದ್ದರು. ಇದೇ ರೀತಿ ಹೆಬ್ಬುಲಿ ತನ್ನ ಘರ್ಜನೆಯನ್ನು ಮುಂದುವರಿಸಿದಲ್ಲಿ ಚಂದನವನದ ಮೊದಲ ನೂರು ಕೋಟಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈ ಹಿಂದೆ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-2 ಚಿತ್ರ ಕೂಡ ಕಲೆಕ್ಷನ್ ವಿಚಾರದಲ್ಲಿ ಸಖತ್ ಸದ್ದು ಮಾಡಿತ್ತು. ಅದರಂತೆ ಈಗ ಹೆಬ್ಬುಲಿ ಸಿನಿಮಾ ಕೂಡ ಗಳಿಕೆಯ ವಿಚಾರದಲ್ಲಿ ಘರ್ಜಿಸುತ್ತಿದೆ.
Thank u soo mch fr this love … @publictvnews https://t.co/5bMudCSFXf
— Kichcha Sudeepa (@KicchaSudeep) February 26, 2017
https://twitter.com/rakshitshetty/status/834583126147895297
https://www.youtube.com/watch?v=SAa0AIr8hIw
https://www.youtube.com/watch?v=9lI9x4QQTvw
https://www.youtube.com/watch?v=UqjQZ3TXcfQ

Leave a Reply