Kantara Chapter 1: ಮಳೆ ಅವಾಂತರದಿಂದ ಶೂಟಿಂಗ್‌ಗೆ ಬ್ರೇಕ್ ಹಾಕಿದ ರಿಷಬ್ ಶೆಟ್ಟಿ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಮಳೆಯ (Rain) ಕಾರಣಕ್ಕೆ ಅನೇಕ ಅವಾಂತರಗಳು ಸೃಷ್ಟಿ ಆಗಿವೆ. ಇದರಿಂದ ಸಿನಿಮಾ ಶೂಟಿಂಗ್‌ಗೂ ಬ್ರೇಕ್ ಬಿದ್ದಿದೆ. ಮಳೆ ಅವಾಂತದಿಂದ ‘ಕಾಂತಾರ ಪ್ರೀಕ್ವೆಲ್ (Kantara 1) ಶೂಟಿಂಗ್‌ಗೆ ರಿಷಬ್ ಶೆಟ್ಟಿ (Rishab Shetty) ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ:ದರ್ಶನ್ ಘಟನೆ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ರಂಗಾಯಣ ರಘು

‘ಕಾಂತಾರ’ ಸಿನಿಮಾದ ಸಕ್ಸಸ್ ನಂತರ ‘ಕಾಂತಾರ’ ಪ್ರೀಕ್ವೆಲ್ ಚಿತ್ರೀಕರಣ ಕುಂದಾಪುರದಲ್ಲಿ ಭರದಿಂದ ನಡೆಯುತ್ತಿತ್ತು. ಮಳೆ ಅಬ್ಬರ ಜೋರಾದ ಹಿನ್ನಲೆ ಶೂಟಿಂಗ್ ನಿಲ್ಲಿಸಿದ್ದಾರೆ ರಿಷಬ್ ಶೆಟ್ಟಿ.

 

View this post on Instagram

 

A post shared by Hombale Films (@hombalefilms)

ಈ ಸಿನಿಮಾಗಾಗಿ ಬೆಂಗಳೂರಿಂದ ಕುಂದಾಪುರಕ್ಕೆ ಫ್ಯಾಮಿಲಿ ಸಮೇತ ರಿಷಬ್ ಶಿಫ್ಟ್ ಆಗಿದ್ದರು. ಅವರ ಇಬ್ಬರು ಮಕ್ಕಳನ್ನು ಅಲ್ಲಿಯೇ ಶಾಲೆಗೆ ಸೇರಿಸಿದ್ದರು. ಮಳೆ ಕಡಿಮೆ ಆದ್ಮೇಲೆ ಮತ್ತೆ ಶೂಟಿಂಗ್‌ಗೆ ಚಾಲನೆ ಸಿಗಲಿದೆ.

ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ರಿಷಬ್ ಫಸ್ಟ್ ಲುಕ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ.