ಆಸ್ತಿಗಾಗಿ ಮಾಲೂರು ಶ್ರೀಗಳಿಂದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಹತ್ಯೆ – ಇಬ್ಬರು ಶ್ರೀಗಳು ಸೇರಿ ಮೂವರು ಅರೆಸ್ಟ್‌!

ಕೋಲಾರ: ಆನಂದ ಮಾರ್ಗದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಹತ್ಯೆ (Ananda Marga Swamiji Case) ಹಿನ್ನೆಲೆ ಆಶ್ರಮದ ಇಬ್ಬರು ಸ್ವಾಮೀಜಿಗಳು ಸೇರಿದಂತೆ ಮೂವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು (Malur) ತಾಲ್ಲೂಕಿನ ಮೈಲಾಂಡಹಳ್ಳಿ ಬಳಿಯ ಆನಂದ ಮಾರ್ಗ ಆಶ್ರಮದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ (70) ಅವರನ್ನು ಶನಿವಾರ ಆಶ್ರಮದಲ್ಲಿಯೇ (Ananda Marga Mutt) ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೇ ಆಶ್ರಮದ ಇಬ್ಬರು ಸ್ವಾಮೀಜಿಗಳು ಮತ್ತು ಮಾಜಿ ಸಿಬ್ಬಂದಿ ಸೇರಿದಂತೆ ಮೂವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಇದನ್ನೂ ಓದಿ: ಶತ್ರುಘ್ನ ಸಿನ್ಹಾ ಮಗಳು ಇಸ್ಲಾಂಗೆ ಮತಾಂತರ ಆಗ್ತಾರಾ?- ಕೊನೆಗೂ ಸಿಕ್ತು ಉತ್ತರ

ಕೊಲೆ ಆರೋಪಿಗಳಾದ ಆಶ್ರಮದ ಆಚಾರ್ಯ ಧರ್ಮ ಪ್ರಾಣಾನಂದ ಸ್ವಾಮೀಜಿ (45), ಪ್ರಾಣೇಶ್ವರಾನಂದ ಸ್ವಾಮೀಜಿ (48) ಹಾಗೂ ಆಶ್ರಮದ ಮಾಜಿ ಸಿಬ್ಬಂದಿ ಅರುಣ್ ಕುಮಾರ್ (55) ಬಂಧಿತ ಆರೋಪಿಗಳಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ. ಇದನ್ನೂ ಓದಿ: ಪ್ರೀತಿಗೆ ಕುಟುಂಬದಿಂದ ವಿರೋಧ; ವಿವಾಹಿತ ಪುರುಷನೊಂದಿಗೆ ವಿದ್ಯಾರ್ಥಿನಿ ಆತ್ಮಹತ್ಯೆ!

ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಹಾಗೂ ಧರ್ಮ ಪ್ರಾಣಾನಂದ ಸ್ವಾಮೀಜಿ, ಅರುಣ್ ಕುಮಾರ್, ಆಡಳಿತ ಮತ್ತು ಜಮೀನು ವಿಚಾರವಾಗಿ ಆಶ್ರಮದ ಎರಡು ಗುಂಪುಗಳ ನಡುವೆ ಅನೇಕ ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಯುತಿತ್ತು. ಅದರಂತೆ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದ ಸ್ವಾಮೀಜಿ ಅವರನ್ನ ಆರೋಪಿಗಳು ಹೊರಗೆ ಎಳೆದು ತಂದಿದ್ದಾರೆ. ಬಳಿಕ ಮುಖಕ್ಕೆ ಸ್ಪ್ರೆ ಸಿಂಪಡಿಸಿದ್ದಾರೆ. ಬಳಿಕ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಆಸ್ತಿ, ಅಧಿಕಾರಕ್ಕಾಗಿ ಸ್ವಾಮೀಜಿಯನ್ನು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಕೋಲಾರದ ತಾಲ್ಲೂಕು ಕಿತ್ತಂಡೂರು ಗ್ರಾಮದ ಆನಂದ ಮಾರ್ಗ ಆಶ್ರಮದಲ್ಲಿಂದು ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಅಪಾರ ಸಂಖ್ಯೆಯ ಬಂಧು-ಬಳಗ ಹಾಗೂ ಶಿಷ್ಯ ವೃಂದದ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರಕರಣದ ಮುಖ್ಯಾಂಶ:

  • ಪಶ್ಚಿಮ ಬಂಗಾಳದಲ್ಲಿ ಶಿಕ್ಷಣ ಸಂಸ್ಥೆ ಹೊಂದಿರುವ ಆನಂದಮಾರ್ಗ ಆಶ್ರಮ.
  • 80ರ ದಶಕದಲ್ಲಿ ಈ ಆಶ್ರಮದ ಸ್ವಾಮೀಜಿಯೊಬ್ಬರು ಮಾಲೂರು ತಾಲೂಕಿಗೆ ಭೇಟಿ ನೀಡಿದ್ದರು.
  • ಶಿಕ್ಷಣ ಸಂಸ್ಥೆ ಆರಂಭಿಸಲು ಕುಟುಂಬವೊಂದು 3 ಎಕರೆ ಜಮೀನನ್ನು ದಾನ ಕೊಟ್ಟಿತ್ತು.
  • ಅದೇ ಜಮೀನಿನಲ್ಲಿ ಕೋಲಾರದ ಪ್ರಥಮ ಪಾಲಿಟೆಕ್ನಿಕ್‌ ಅನ್ನು ಆಶ್ರಮ ಆರಂಭಿಸಿತ್ತು.
  • ಕಾಲಾನಂತರದಲ್ಲಿ ಆಶ್ರಮ 10 ಎಕರೆಗೂ ಅಧಿಕ ಜಮೀನು ಖರೀದಿಸಿತ್ತು.
  • ಈ ಜಮೀನಿನ ವಿಚಾರವಾಗಿ ಹಲವು ವರ್ಷಗಳಿಂದ ಸ್ವಾಮೀಜಿಗಳ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.
  • ವಿವಾದ ಕೋರ್ಟ್‌ ಮೆಟ್ಟಿಲೇರಿದ್ದರೂ ಬಗೆಹರಿದಿರಲಿಲ್ಲ. ಕಾಲೇಜು ಬಂದ್‌ ಆಗಿತ್ತು.
  • ಇದೀಗ ಸ್ವಾಮೀಜಿಗಳ ನಡುವಿನ ಜಗಳ ವಿಕೋಪಕ್ಕೆ ಕಾರಣವಾಗಿ ಇಬ್ಬರು ಸ್ವಾಮೀಜಿಗಳು ಸೇರಿ ಒಬ್ಬರು ಸ್ವಾಮೀಜಿಯ ಹತ್ಯೆ ಮಾಡಿದ್ದಾರೆ.