ತೆಲುಗು ನಿರ್ದೇಶಕನ ಜೊತೆ ಕೈಜೋಡಿಸಿದ ಸನ್ನಿ ಡಿಯೋಲ್

‘ಗದರ್ 2′ (Gadar 2) ಸಿನಿಮಾ ಕಮ್ ಬ್ಯಾಕ್ ಆಗಿ ಗೆದ್ದು ಬೀಗುತ್ತಿರುವ ಸನ್ನಿ ಡಿಯೋಲ್ (Sunny Deol) ಇದೀಗ ತೆಲುಗಿನ ನಿರ್ದೇಶಕ ಗೋಪಿಚಂದ್ ಮಲಿನೇನಿ (Gopichand Malineni)g ಜೊತೆ ಕೈಜೋಡಿಸಿದ್ದಾರೆ. ಹೊಸ ಸಿನಿಮಾಗಾಗಿ ಇಬ್ಬರೂ ಜೊತೆಯಾಗಿದ್ದಾರೆ.

ಕ್ಲ್ಯಾಕ್, ವೀರ ಸಿಂಹ ರೆಡ್ಡಿ, ವಿನ್ನರ್ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಗೋಪಿಚಂದ್ ಮಲಿನೇನಿ ಬರೆದಿರುವ ಕಥೆ ಕೇಳಿ ಥ್ರಿಲ್ ಆಗಿ ಸಿನಿಮಾ ಮಾಡಲು ಸನ್ನಿ ಡಿಯೋಲ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಅನುಷ್ಕಾ ಶೆಟ್ಟಿ

ಸನ್ನಿ ಡಿಯೋಲ್ ಜೊತೆ ಗೋಪಿಚಂದ್ ಸಿನಿಮಾ ಮಾಡುತ್ತಿರೋದಾಗಿ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ. ‘ಎಸ್‌ಡಿಜಿಎಂ’ ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ.

ಅಂದಹಾಗೆ, ಗೆಲುವಿಗಾಗಿ ಸ್ಟಾರ್ ಕಲಾವಿದರು ಸೌತ್‌ನತ್ತ ಮುಖ ಮಾಡುತ್ತಿದ್ದಾರೆ. ಅದೇ ತಂತ್ರವನ್ನೇ ಸನ್ನಿ ಡಿಯೋಲ್ ಮಾಡುತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿ ಕುರಿತ ಸಿನಿಮಾ ಬರಲು ‘ಗದರ್ 2’ ನಟ ರೆಡಿಯಾಗಿದ್ದಾರೆ.