ನನ್ನ ತಾಯಿ ಕೂಡ ಪ್ರತಿಭಟನೆಯಲ್ಲಿದ್ರು- ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಬ್ಬಂದಿ ಸಮರ್ಥನೆ

ಚಂಡೀಗಢ: ಬಾಲಿವುಡ್‌ ನಟಿ, ಮಂಡಿ ಕ್ಷೇತ್ರದ ನೂತನ ಸಂಸದೆ ಕಂಗನಾ ರಣಾವತ್‌ಗೆ (Kangana Ranaut) ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್‌ ಮಹಿಳಾ ಸಿಬ್ಬಂದಿ ಕುಲ್ವೀಂದರ್‌ ಕೌರ್‌ (Kulwinder Kaur) ಪ್ರತಿಕ್ರಿಯಿಸಿದ್ದಾರೆ.

ನಟಿಯ ಹಳೆಯ ಹೇಳಿಕೆಯಿಂದ ನಾನು ಪ್ರಚೋದನೆಗೊಂಡಿದ್ದೇನೆ. ಇದೇ ಸಿಟ್ಟಿನಿಂದ ಇಂದು ನಾನು ಆಕೆಗೆ ಕಪಾಳಮೋಕ್ಷ ಮಾಡಿರುವುದಾಗಿ ತಿಳಿಸಿದರು.

ಹಳೆಯ ಹೇಳಿಕೆ ಏನು..?: ಕಂಗನಾ ಅವರು ಈ ಹಿಂದೆ ಮೋದಿ ನೇತೃತ್ವದ 2.0 ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರೈತರು 100 ರೂಪಾಯಿಗೆ ಅಲ್ಲಿ ಕೂತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆಕೆ ಅಲ್ಲಿ ಹೋಗಿ ಕುಳಿತುಕೊಳ್ಳುವರೇ?. ನಟಿ ಈ ಹೇಳಿಕೆ ನೀಡಿದಾಗ ನನ್ನ ತಾಯಿ ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು ಎಂದು ಕೌರ್ ಆಕ್ರೋಶ ಹೊರಹಾಕಿದರು.

ಸದ್ಯ ಕಂಗನಾ ಚಂಡೀಗಢ ವಿಮಾನ ನಿಲ್ದಾಣದಲ್ಲಿರುವ ಕೆಲ ವೀಡಿಯೋಗಳು ವೈರಲ್‌ ಆಗುತ್ತಿವೆ. ವೀಡಿಯೋದಲ್ಲಿ ಕಂಗನಾ ಅವರು ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಕೌಂಟರ್ ಕಡೆಗೆ ಬೆಂಗಾವಲಾಗಿ ಹೋಗುವುದನ್ನು ತೋರಿಸುತ್ತದೆ. ಈ ಸಮಯದಲ್ಲಿ ತೀವ್ರ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಾನು ಸುರಕ್ಷಿತವಾಗಿದ್ದೇನೆ: ಕಂಗನಾ

ಕಂಗನಾ ಅವರು ಚಂಡಿಗಢದಿಂದ ದೆಹಲಿಗೆ ಪ್ರಯಾಣಿಸುವ ಮೊದಲು ಈ ಘಟನೆ ನಡೆದಿದೆ. ದೆಹಲಿಗೆ ಬಂದ ಬಳಿಕ ಕಂಗನಾ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದು. ನಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಟಿ, ನೂತನ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ