ರೇವ್ ಪಾರ್ಟಿಯಲ್ಲಿ ಗಾಂಜಾ, ಡ್ರಗ್ಸ್ ಸಿಕ್ಕಿದೆ – ಪಾಲ್ಗೊಂಡವರ ಹೆಸರು ಪೊಲೀಸರ ಬಳಿ ಇದೆ: ಪರಮೇಶ್ವರ್

ಬೆಂಗಳೂರು: ಸೋಮವಾರ ನಡೆದ ರೇವ್ ಪಾರ್ಟಿ (Rev Party) ಮೇಲಿನ ಸಿಸಿಬಿ ದಾಳಿಯಲ್ಲಿ (CCB Raid) ಗಾಂಜಾ, ಡ್ರಗ್ಸ್ ಹಾಗೂ ಸಿಂಥೆಟಿಕ್ ಡ್ರಗ್ಸ್ ಸಿಕ್ಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸೋಮವಾರ ಬೆಂಗಳೂರಿನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು ಎಂದು ಸಿಸಿಬಿಯವರು ದಾಳಿ ಮಾಡಿದ್ದಾರೆ. ಯಾರ‍್ಯಾರು ಬಂದಿದ್ದರು ಎಂದು ಪೊಲೀಸರು ಮಾಹಿತಿ ತೆಗೆದುಕೊಂಡಿದ್ದಾರೆ. ದಾಳಿ ವೇಳೆ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಪತ್ತೆ ಆಗಿದೆ. ಕಾನೂನು ಪ್ರಕಾರ ಕ್ರಮ ಆಗಲಿದೆ. ಡ್ರಗ್ಸ್ ಫ್ರೀ ರಾಜ್ಯ ಮಾಡಬೇಕು ಎಂದು ಇದ್ದೇವೆ. ಸಾವಿರಾರು ಕೋಟಿ ಡ್ರಗ್ಸ್ ದಂಧೆ ಹಿಡಿದಿದ್ದೇವೆ. ಡ್ರಗ್ಸ್ ಪೂರೈಕೆ, ಸಾಗಣೆ ಹತ್ತಿಕ್ಕುವ ಕೆಲಸ ಆಗುತ್ತಿದೆ. ಗಾಂಜಾ ಎಲ್ಲಿಂದ ಬರುತ್ತೆ ಎಂದು ಮಾಹಿತಿ ಮೇಲೆ ಹಿಡಿಯುತ್ತೇವೆ. ಪೆಡ್ಲರ್ಸ್ ಯಾರಿದ್ದಾರೆ ಅವರನ್ನು ಹಿಡಿಯವುದು ಬಹಳ ಮುಖ್ಯ. ಸ್ಟೂಡೆಂಟ್ಸ್ ಎಂದು ಹೇಳಿಕೊಂಡು ಇಲ್ಲಿ ಬಂದು ಕೃತ್ಯ ಮಾಡುತ್ತಾರೆ. ಅವರ ಮೇಲೆ ನಿಗಾ ಇಟ್ಟಿದ್ದೇವೆ ಎಂದರು. ಇದನ್ನೂ ಓದಿ: ನಮ್ಮ ಆಡಳಿತಾವಧಿಯಲ್ಲಿ ಎನ್‌ಕೌಂಟರ್‌ಗಳಾಗಿದ್ದರೆ ಇವತ್ತು ಇಂತಹ‌ ಕೃತ್ಯಗಳಾಗುತ್ತಿರಲಿಲ್ಲ: ಯತ್ನಾಳ್‌

ವಿದೇಶಾಂಗ ಇಲಾಖೆ ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic Passport) ರದ್ದು ಮಾಡಿದರೆ, ಪ್ರಜ್ವಲ್ (Prajwal Revanna) ವಿದೇಶದಲ್ಲಿ ಇರಲು ಆಗಲ್ಲ. ವಾಪಸ್ ಬರಲೇಬೇಕಾಗುತ್ತದೆ. ಪ್ರಜ್ವಲ್ ಅರೆಸ್ಟ್ ವಾರಂಟ್ ಆಧಾರದಲ್ಲಿ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್ ರದ್ದತಿಗೆ ಎಸ್‌ಐಟಿ ಪತ್ರ ಬರೆದಿದೆ. ಈಗಾಗಲೇ ಪ್ರಧಾನಿಯವರಿಗೆ ಸಿಎಂ ಸಹ ಪತ್ರ ಬರೆದಿದ್ದರು. ಇದರಲ್ಲಿ ವಿದೇಶಾಂಗ ಇಲಾಖೆಯ ಸಹಕಾರ ಅಗತ್ಯವಿದೆ. ಇನ್ನು ಎಲ್ ಆರ್ ಶಿವರಾಮೇಗೌಡ ಮತ್ತು ವಕೀಲ ದೇವರಾಜೇಗೌಡ ಆಡಿಯೋ ಕುರಿತ ತನಿಖೆಯನ್ನು ನಡೆಸಬೇಕಾ ಬೇಡವಾ ಎಂದು ಎಸ್‌ಐಟಿ (SIT) ನಿರ್ಧಾರ ಮಾಡಲಿದೆ. ಎಸ್‌ಐಟಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ CWMA ಸೂಚನೆ

ಕುಮಾರಸ್ವಾಮಿ ಪ್ರಜ್ವಲ್ ವಾಪಸ್ ಬರಲಿ ಎಂದು ಕರೆದಿದ್ದು ಅವರ ಕುಟುಂಬದ ವಿಚಾರ. ಪ್ರಜ್ವಲ್ ವಾಪಸ್ ಬಂದು ಕೇಸ್ ಎದುರಿಸಲಿ. ಸರ್ಕಾರ ಯಾರ ಫೋನ್ ಟ್ಯಾಪ್ ಮಾಡಿಲ್ಲ ಎಂದು ನಿನ್ನೆಯೇ (ಸೋಮವಾರ) ಹೇಳಿದ್ದೇನೆ. ಟ್ಯಾಪಿಂಗ್ ಬಗ್ಗೆ ಹೆಚ್‌ಡಿಕೆ ಬಳಿ ನಿಖರ ಮಾಹಿತಿ ಇದ್ದರೆ ಕೊಡಲಿ, ತನಿಖೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಲಂಡನ್‌-ಸಿಂಗಾಪುರ ವಿಮಾನದಲ್ಲಿ ಪ್ರಕ್ಷುಬ್ಧತೆ; ಓರ್ವ ಸಾವು, 30 ಪ್ರಯಾಣಿಕರಿಗೆ ಗಾಯ