ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಹೀನಾಯವಾಗಿ ಸೋತ ನಂತರ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಅವರು ನಾಯಕ ಕೆಎಲ್ ರಾಹುಲ್ (KL Rahul) ಅವರಿಗೆ ಮೈದಾನದಲ್ಲೇ ಫುಲ್ ಕ್ಲಾಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
This is just pathetic from @LucknowIPL owner
Never saw SRH management with players on the field or even closer to dressing room irrespective of so many bad seasons and still face lot of wrath for getting involved. Just look at this @klrahul leave this shit next year #SRHvsLSG pic.twitter.com/6NlAvHMCjJ— SRI (@srikant5333) May 8, 2024
ಮೊದಲು ಬ್ಯಾಟ್ ಮಾಡಿದ ಲಕ್ನೋ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಸವಾಲಿನ ಮೊತ್ತವಾದರೂ ಹೈದರಾಬಾದ್ ತಂಡ ಕೇವಲ 9.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 167 ರನ್ ಹೊಡೆದು ಭರ್ಜರಿ 10 ವಿಕೆಟ್ಗಳ ಜಯ ಸಾಧಿಸಿತು. ಇದನ್ನೂ ಓದಿ: 16 ಬೌಂಡರಿ, 14 ಸಿಕ್ಸರ್; ನೋ ಲಾಸ್ನಲ್ಲಿ ಸನ್ ರೈಸರ್ಸ್ ಪಾಸ್ – ಹೈದರಾಬಾದ್ಗೆ 10 ವಿಕೆಟ್ಗಳ ಅದ್ಧೂರಿ ಜಯ!
ಪಂದ್ಯ ಸೋತ ನಂತರ ಡಗೌಟ್ಗೆ ಬಂದ ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್ ಅವರಿಗೆ ಫುಲ್ ಕ್ಲಾಸ್ ಮಾಡಿದ್ದಾರೆ. ತಂಡದ ಕಳಪೆ ಸಾಧನೆ ಗೋಯೆಂಕಾ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ಇನ್ನೊಂದು ಕಡೆ ಕೆಎಲ್ ರಾಹುಲ್ ಮಲೀಕರಿಗೆ ಸ್ಪಷ್ಟನೆ ನೀಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
A player of such calibre KL Rahul needing to bear the wrath of the team owner on field in national media is depressing to say the least ! #pathetic
U guys are disappointed – we get it ! Talk it out in a team meeting behind closed doors fgs !
— Mahi (@mahiban4u) May 8, 2024
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Viral Video) ಆಗಿದ್ದು ನೆಟ್ಟಿಗರು ಸಂಜೀವ್ ಗೋಯೆಂಕಾ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
https://twitter.com/Ayaz56345/status/1788459506415874343
ಲಕ್ನೋ ತಂಡ ಹೀನಾಯವಾಗಿ ಸೋತಿದೆ. ಹಾಗೆಂದ ಮಾತ್ರಕ್ಕೆ ಸೋಲಿನ ಪರಾಮರ್ಶೆಯನ್ನು ನಾಲ್ಕು ಗೋಡೆಯ ಒಳಗಡೆ ಮಾಡಬೇಕು. ಅದನ್ನು ಬಿಟ್ಟ ಮೈದಾನದಲ್ಲಿ ಎಲ್ಲರ ಮುಂದೆ ನಾಯಕನನ್ನು ತರಾಟೆಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
https://twitter.com/T_Investor_/status/1788404214739423318
ಇನ್ನು ಕೆಲವರು ಕೆಎಲ್ ರಾಹುಲ್ ಟೀಂ ಇಂಡಿಯಾದ ಸ್ಟಾರ್ ಆಟಗಾರ. ಪಂದ್ಯದಲ್ಲಿ ಸೋಲು ಗೆಲುವು ಸಾಮಾನ್ಯ. ಹಾಗೆಂದ ಮಾತ್ರ ಮಾಲೀಕ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
2021ರಲ್ಲಿ ಸಂಜೀವ್ ಗೋಯೆಂಕಾ ನೇತೃತ್ವದ ಆರ್ಪಿಎಸ್ಜಿ ಗ್ರೂಪ್ 7,090 ಕೋಟಿ ರೂ. ಬಿಡ್ ಮಾಡಿ ಲಕ್ನೋ ತಂಡವನ್ನು ಖರೀದಿಸಿತ್ತು. 2022 ಮತ್ತು 2023ರಲ್ಲಿ ಲಕ್ನೋ ತಂಡ ಪ್ಲೇ ಆಫ್ ಪ್ರವೇಶಿಸಿತ್ತು.
