ದಿಢೀರನೇ ಮದುವೆ ಫೋಟೋ ಡಿಲೀಟ್ ಮಾಡಿ ಅನುಮಾನ ಮೂಡಿಸಿದ ರಣ್‌ವೀರ್ ಸಿಂಗ್

ಬಾಲಿವುಡ್ ನಟ ರಣ್‌ವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಿಢೀರನೇ ಮದುವೆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ರಣ್‌ವೀರ್‌ ತೆಗೆದುಹಾಕಿದ್ದಾರೆ. ರಣ್‌ವೀರ್ ನಡೆ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದೆ.

ದಿಢೀರನೇ ರಣ್‌ವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಮದುವೆ ಫೋಟೋ (Wedding Photo) ಡಿಲೀಟ್ ಮಾಡಿರೋದು ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಮಗು ಬರುವ ಸಂತಸದ ಸುದ್ದಿ ನಡುವೆ ಹೀಗೆ ರಣ್‌ವೀರ್ ಯಾಕೆ ಮಾಡಿದ್ರು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.‌ ಇದನ್ನೂ ಓದಿ:ಕಾಮಾಕ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ

2013ರಿಂದ ಪೋಸ್ಟ್ ಮಾಡಿದ ಎಲ್ಲಾ ಫೋಟೋಗಳನ್ನು ರಣ್‌ವೀರ್ ತೆಗೆದು ಹಾಕಿದ್ದಾರೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ನಾಲ್ಕೇ ವರ್ಷಕ್ಕೆ ಡಿವೋರ್ಸ್ ಪಡೆದ ಯಶ್ ಚಿತ್ರದ ನಾಯಕಿ ಭಾಮಾ

ಅಂದಹಾಗೆ, ಹಲವು ವರ್ಷಗಳ ಡೇಟಿಂಗ್ ನಂತರ 2018ರಲ್ಲಿ ರಣ್‌ವೀರ್ ಸಿಂಗ್- ದೀಪಿಕಾ ಪಡುಕೋಣೆ ಕೊಂಕಣಿ ಮತ್ತು ಸಿಂಧಿ ಪದ್ಧತಿಯಂತೆ ಮದುವೆಯಾದರು.