ಜೆಡಿಎಸ್‍ನಿಂದ ಪ್ರಜ್ವಲ್ ರೇವಣ್ಣ ಅಮಾನತು

ಬೆಂಗಳೂರು: ಸತತ ಆರೋಪಗಳ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣರನ್ನು (Prajwal Revanna) ಪಕ್ಷದಿಂದ ಅಮಾನತು ಮಾಡಲಾಗಿದೆ.

ಈ ಸಂಬಂಧ ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy), ಪ್ರಜ್ವಲ್‌ ಅಮಾನತಿಗೆ ನಿನ್ನೆಯೇ ನಿರ್ಧಾರ ಮಾಡಲಾಗಿದೆ. ತಪ್ಪು ಯಾರೇ ಮಾಡಿದ್ರೂ ತಪ್ಪು. SIT ತನಿಖೆಯ ವರದಿ ಬಂದ ಬಳಿಕ ಎಲ್ಲವನ್ನೂ ಮಾತಾಡ್ತೀನಿ ಎಂದರು.

ಪೆನ್‍ಡ್ರೈವ್ ಸುಳಿಯಲ್ಲಿರುವ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಸನ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಆತ ಮನುಷ್ಯನಲ್ಲ, ಮನುಷ್ಯ ಕುಲದಲ್ಲಿ ಹುಟ್ಟಿಲ್ಲ. ದೇವೇಗೌಡರ ಮೊಮ್ಮಗ ಅಂತ ಬಿಡಬಾರದು. ಈ ಕೂಡಲೇ ಪ್ರಜ್ವಲ್ ಬಂಧಿಸುವಂತೆ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣವನ್ನು ಈಗಾಗಗಲೇ ಎಸ್‍ಐಟಿ ಅಧಿಕೃತವಾಗಿ ಕೈಗೆತ್ತಿಕೊಂಡಿದೆ. ಎಸ್‍ಐಟಿ ಮುಖ್ಯಸ್ಥ ಬಿ.ಕೆ ಸಿಂಗ್ ನೇತೃತ್ವದ ಟೀಂ ತನಿಖೆ ಶುರುಮಾಡಲಿದ್ದು, ಹೊಳೆ ನರಸಿಪುರದಲ್ಲಿ ದಾಖಲಾಗಿರುವ ಎಫ್ ಐಆರ್ ಅಧಾರದ ಮೇಲೆ ತನಿಖೆ ನಡೆಸಲಿದೆ. ಇನ್ನು ಎಸ್‍ಐಟಿ ತನಿಖೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಎಸ್ಕೇಪ್  ಆಗಿದ್ದಾರೆ.