ಮದುವೆಯಾಗಿ 12 ವರ್ಷಗಳ ನಂತರ ಲವ್‌ ಬ್ರೇಕಪ್‌ ಬಗ್ಗೆ ಬಾಯ್ಬಿಟ್ಟ ‘ರವಿಶಾಸ್ತ್ರಿ’ ನಟಿ ಸ್ನೇಹಾ

ನ್ನಡದ ರವಿಶಾಸ್ತ್ರಿ, ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿರುವ ತಮಿಳು ನಟಿ ಸ್ನೇಹಾ (Actress Sneha) ಇದೀಗ ತಮ್ಮ ದಾಂಪತ್ಯದ (Wedding) ಬಗ್ಗೆ ಮಾತನಾಡಿದ್ದಾರೆ. ಕೆಲ ತಿಂಗಳುಗಳಿಂದ ಸ್ನೇಹಾ ದಾಂಪತ್ಯದಲ್ಲಿ ಬಿರುಕಾಗಿದೆ. ಡಿವೋರ್ಸ್‌ಗೆ ಸ್ನೇಹಾ- ಪ್ರಸನ್ನ ದಂಪತಿ ಸಜ್ಜಾಗಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಡಿವೋರ್ಸ್ (Divorce) ಸುದ್ದಿ ಸುಳ್ಳು ನಾವು ಚೆನ್ನಾಗಿದ್ದೇವೆ ಎಂದು ನಟಿ ಉತ್ತರ ನೀಡಿದ್ದಾರೆ. ದಾಂಪತ್ಯದ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಪ್ರೀತಿಯಲ್ಲಿ (Love) ಪೊಸೆಸಿವ್‌ನೆಸ್ ಬೇರೆ. ನಂಬಿಕೆ ಬೇರೆ. ಹೆಚ್ಚು ಪೊಸೆಸಿವ್ ಆಗಿಬಿಟ್ಟರೆ ನಂಬಿಕೆ ಬ್ಯಾಲೆನ್ಸ್ ಮಾಡುವುದು ಕಷ್ಟ. ಮತ್ತೊಬ್ಬರಿಗೆ ಅದು ಅರ್ಥವಾಗುವುದಿಲ್ಲ. ಎಲ್ಲಿ ಹೋಗುತ್ತಿದ್ದೀರಾ, ಏನು ಮಾಡುತ್ತಿದ್ದೀರಾ? ಎಂದು ಕೇಳುವುದು ಕೂಡ ಪೊಸೆಸಿವ್‌ನೆಸ್ ಇರುಬಹುದು, ನಂಬಿಕೆಯೂ ಆಗಿರಬಹುದು. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಂಡರೆ ಸಮಸ್ಯೆ ಆಗಲ್ಲ ಎಂದು ನಟಿ ಸ್ನೇಹಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಅಕ್ಷಯ್ ಕುಮಾರ್ ಬಳಿಕ ‘ಕಣ್ಣಪ್ಪ’ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್

ದೈನಂದಿನ ಜೀವನದಲ್ಲಿ ನಾವು ಏನು ಮಾಡುತ್ತಿದ್ದೇನೆ. ಎಲ್ಲಿ ಹೋಗುತ್ತಿದ್ದೇನೆ. ಎಷ್ಟು ಹೊತ್ತಿಗೆ ಬರುತ್ತೇನೆ ಎನ್ನುವುದನ್ನು ಒಬ್ಬರು ಕೇಳುವುದಕ್ಕೆ ಮುನ್ನ ಇನ್ನೊಬ್ಬರು ಹೇಳಬೇಕು. ಅಲ್ಲಿಗೆ ಹೋದ ಮೇಲೂ ಸಮಯ ಇದ್ದರೆ ಒಮ್ಮೆ ಫೋನ್ ಮಾಡಿ ಮಾತನಾಡಿ. ಊಟ ಆಯ್ತಾ? ಏನು ಮಾಡುತ್ತಿದ್ದೀಯಾ ಅಂತ ಕೇಳಬೇಕು. ಇಂತಹ ವಿಷಯಗಳೇ ಇಬ್ಬರಲ್ಲಿ ನಂಬಿಕೆ ಹೆಚ್ಚಿಸುತ್ತದೆ. ಆರಂಭದಲ್ಲಿ ನಾನು ಸ್ವಲ್ಪ ಪೊಸೆಸಿವ್ ಆಗಿದ್ದೆ. ಹಾಗಂತ ನಂಬಿಕೆ ಇರಲಿಲ್ಲ ಅಂತ ಅಲ್ಲ. ಮದುವೆ ಆದ ಮೇಲೆ ಜೀವನ ನಮಗೂ ಬೋರ್ ಎನಿಸಿತ್ತು. ನಾನು ಸಾಕಷ್ಟು ಜಗಳ ಆಡಿದ್ದೇವೆ. ಜಗಳದ ಬಳಿಕ ಇಬ್ಬರೂ ಡೇಟ್ ನೈಟ್ ಹೋಗುತ್ತೇವೆ. ಆ ಸಮಯದಲ್ಲಿ ಮಾತನಾಡಿ, ಎಲ್ಲಾ ಬಗೆಹರಿಸಿಕೊಳ್ಳುತ್ತೇವೆ. ಬಳಿಕ ಮತ್ತೆ ಜೀವನ ಹೀಗೆ ಮುಂದುವರೆಯುತ್ತದೆ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಬೇಕು. ಆಗ ಸಮಸ್ಯೆ ಇರುವುದಿಲ್ಲ ಎಂದು ವೈವಾಹಿಕ ಬದುಕಿನ ಬಗ್ಗೆ ನಟಿ ಸಲಹೆ ನೀಡಿದ್ದಾರೆ.

ಸ್ನೇಹಾ ಮೊದಲ ಬಾರಿಗೆ ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಪ್ರಸನ್ನ(Actor Prasanna) ಕೈ ಹಿಡಿಯುವ ಮುನ್ನ ನನಗೆ ಒಂದು ಲವ್ ಬ್ರೇಕಪ್ (Love Breakup) ಆಗಿತ್ತು. ಆ ಸಮಯದಲ್ಲಿ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದೆ. ಒಂದರ್ಥದಲ್ಲಿ ಖಿನ್ನತೆಗೆ ಒಳಗಾಗಿದ್ದೆ. ಆ ಇಡೀ ವರ್ಷ ನನಗೆ ಬಹಳ ಕೆಟ್ಟದಾಗಿತ್ತು. ಹೊರಗೆ ಸಾಕಷ್ಟು ಜನ ಏನೇನೋ ಮಾತನಾಡುತ್ತಿದ್ದರು. ಈ ಬಗ್ಗೆ ಪೋಷಕರು ನನ್ನ ಜೊತೆ ಚರ್ಚಿಸಿ ಸಂತೈಸಿದ್ದರು. ಅದರ ನಡುವೆ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ವಿಶೇಷ ಅಂದರೆ, ಅದೇ ವರ್ಷ ನನ್ನ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಆ ವರ್ಷವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ನಟಿ ತೆರೆ ಎಳೆದಿದ್ದಾರೆ.