ಅಮೇಠಿಯಿಂದ ಸ್ಪರ್ಧೆ ಮಾಡ್ತೀರಾ ಎಂದು ಕೇಳಿದ್ದಕ್ಕೆ ಇದು ಬಿಜೆಪಿ ಪ್ರಶ್ನೆಯೆಂದ ರಾಹುಲ್‌

ಲಕ್ನೋ: ಉತ್ತರ ಪ್ರದೇಶದ (Uttar Pradesh) ಅಮೇಠಿ ಕ್ಷೇತ್ರದ (Amethi Lok Sabha) ಅಭ್ಯರ್ಥಿ ಯಾರು ಎನ್ನುವುದನ್ನು ಕಾಂಗ್ರೆಸ್‌ ಚುನಾವಣಾ ಸಮಿತಿ ನಿರ್ಧಾರ ಮಾಡಲಿದೆ ಎಂದು ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

ಇಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ (Akhilesh Yadav) ಜೊತೆ ಸೇರಿ ರಾಹುಲ್‌ ಗಾಂಧಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಪತ್ರಕರ್ತರೊಬ್ಬರು ಈ ಬಾರಿ ಅಮೇಠಿಯಿಂದ ಸ್ಪರ್ಧೆ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ರಾಹುಲ್‌ ಗಾಂಧಿ, ಇದು ಬಿಜೆಪಿ ಪ್ರಶ್ನೆ ಎಂದು ಹೇಳಿದರು. ಇದನ್ನೂ ಓದಿ: ಪಕ್ಷದ ಸಿದ್ದಾಂತ ಮೆಚ್ಚಿ ಸೇರಿದ್ದೇನೆ – ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆ

ಇದು ಬಿಜೆಪಿಯ ಪ್ರಶ್ನೆ. ತುಂಬಾ ಒಳ್ಳೆಯದು. ನಾನು ಯಾವುದೇ ಆದೇಶವನ್ನು ಸ್ವೀಕರಿಸುತ್ತೇನೆ. ನಮ್ಮ ಪಕ್ಷದಲ್ಲಿ, ಈ ಎಲ್ಲಾ ಅಭ್ಯರ್ಥಿಗಳ ಆಯ್ಕೆ ನಿರ್ಧಾರಗಳನ್ನು ಕಾಂಗ್ರೆಸ್ ಚುನಾವಣಾ ಸಮಿತಿಯು ತೆಗೆದುಕೊಳ್ಳುತ್ತದೆ. ನಾನು ಪಕ್ಷದ ಸೈನಿಕನಾಗಿದ್ದು ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.