ದಳಪತಿ ವಿಜಯ್‌ಗೆ ನಾಯಕಿಯಾಗಿ ನಟಿಸಿದ್ದ ಸಿನಿಮಾವನ್ನು ಸ್ಮರಿಸಿದ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಇಂಗ್ಲಿಷ್ ಸಿನಿಮಾಗಳ ಮೂಲಕ ನಟಿ ಮೋಡಿ ಮಾಡುತ್ತಿದ್ದಾರೆ. ಇದೀಗ ದಳಪತಿ ವಿಜಯ್ (Thalapathy Vijay) ಜೊತೆಗಿನ ಫೋಟೋ ಹಂಚಿಕೊಂಡು ಚೊಚ್ಚಲ ಸಿನಿಮಾದ ಬಗ್ಗೆ ಪ್ರಿಯಾಂಕಾ ಸ್ಮರಿಸಿದ್ದಾರೆ.

ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಸದಾ ತಮ್ಮ ಕೆಲಸದ ಮೂಲಕ ಉತ್ತರ ಕೊಡುವ ನಟಿ ತಾವು ಬೆಳೆದು ಬಂದ ದಾರಿಯನ್ನು ಮರೆತಿಲ್ಲ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ 22 ವರ್ಷಗಳ ಹಿಂದಿನ ಪಯಣವನ್ನು ನಟಿ ನೆನಪು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಬಾಯ್ ಫ್ರೆಂಡ್ ಜೊತೆ ಗೋವಾಗೆ ಹಾರಿದ ಬಿಗ್ ಬಾಸ್ ಸ್ಪರ್ಧಿ ಪವಿ

ಈಗ ಹಾಲಿವುಡ್ ನಟಿಯಾಗಿ ಮೆರೆಯುತ್ತಿರುವ ಪ್ರಿಯಾಂಕಾ, ಬಾಲಿವುಡ್‌ನಲ್ಲಿ ಅವರ ಪಯಣ ಶುರುವಾಯ್ತು ಎಂದು ಅನೇಕರು ಭಾವಿಸಿದ್ದಾರೆ. ಆದರೆ ಅಸಲಿಗೆ ಅವರು ಮೊದಲು ನಟಿಸಿದ್ದು, ಕಾಲಿವುಡ್‌ನ ತಮಿಳನ್ ಎಂಬ ಚಿತ್ರದಲ್ಲಿ ದಳಪತಿ ವಿಜಯ್‌ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಈ ಸಿನಿಮಾ ರಿಲೀಸ್ ಆಗಿ 22 ವರ್ಷಗಳು ಪೂರೈಸಿದೆ. ಈ ಬೆನ್ನಲ್ಲೇ ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ. 2000ರಲ್ಲಿ ಮಿಸ್ ವರ್ಲ್ಡ್ ಪಟ್ಟ ಗೆದ್ದ ಪ್ರಿಯಾಂಕಾಗೆ ಮಜಿತ್ ನಿರ್ದೇಶನದ ‘ತಮಿಳನ್’ (Thamizhan) ಚಿತ್ರದಲ್ಲಿ ನಟಿಸುವ ಚಾನ್ಸ್‌ ಸಿಕ್ಕಿತ್ತು. ಅದಾದ ಬಳಿಕ ಬಾಲಿವುಡ್‌ನಲ್ಲಿ ನೆಲೆ ಗಿಟ್ಟಿಸಿಕೊಂಡರು.

ಇದೀಗ ಪ್ರಿಯಾಂಕಾ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಬಂದ ಹಾದಿಯನ್ನು ನಟಿ ಮರೆತಿಲ್ಲ ಎಂದು ಹಾಡಿ ಹೊಗಳಿದ್ದಾರೆ.