‘ವಾರ್ 2’ನಲ್ಲಿ ಇರಲಿದೆ ನಾಟು ನಾಟು ರೀತಿಯೇ ಎನರ್ಜಿಟಿಕ್ ಡ್ಯಾನ್ಸ್

ತೆಲುಗು ಸ್ಟಾರ್ ಜ್ಯೂ.ಎನ್‌ಟಿಆರ್ (Jr.Ntr) ಇದೀಗ ಮುಂಬೈಗೆ ಎಂಟ್ರಿ ಕೊಟ್ಟಿದ್ದಾರೆ. ವಾರ್ 2 (War 2) ಸಿನಿಮಾದ ಶೂಟಿಂಗ್‌ನಲ್ಲಿ ಹೃತಿಕ್ ರೋಷನ್ (Hrithik Roshan) ಜೊತೆ ಭಾಗವಹಿಸಿದ್ದಾರೆ. ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಚಿತ್ರದ ಬಗ್ಗೆ ಹಲವು ವಿಚಾರಗಳು ಸದ್ದು ಮಾಡುತ್ತಿವೆ. ಆರ್‌ಆರ್‌ಆರ್ ಸಿನಿಮಾದಲ್ಲಿ ‘ನಾಟು ನಾಟು’ (Naatu Naatu) ಸಾಂಗ್ ಇದ್ದಂತೆಯೇ ವಾರ್ 2ನಲ್ಲಿ ಹೃತಿಕ್ ಮತ್ತು ಜ್ಯೂ.ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಇರಲಿದೆ.

ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ವಾರ್ 2 ಸಿನಿಮಾ ಮೂಡಿ ಬರಲಿದ್ದು, ಹೃತಿಕ್ ರೋಷನ್ ಜೊತೆ ಜ್ಯೂ.ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್(Yash Raj Films) ಬಂಡವಾಳ ಹೂಡಿದೆ. 10 ದಿನಗಳ ಕಾಲ ತಾರಕ್ ಮುಂಬೈನಲ್ಲಿಯೇ ಬೀಡು ಬಿಡಲಿದ್ದಾರೆ. ಈ ಬೆನ್ನಲ್ಲೇ ‘ವಾರ್ 2’ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ.

ಹೃತಿಕ್ ರೋಷನ್ ಅವರು ಎಂತಹ ಅದ್ಭುತ ಡ್ಯಾನ್ಸರ್. ಅದರ ಜೊತೆಗೆ ಜ್ಯೂ.ಎನ್‌ಟಿಆರ್ ಕೂಡ ಪ್ರತಿಭಾವಂತ ಡ್ಯಾನ್ಸರ್ ಹಾಗಾಗಿ ಅವರಿಬ್ಬರ ಪ್ರತಿಭೆಯನ್ನು ಸದ್ಭಳಕೆ ಮಾಡಿಕೊಳ್ಳಲು ನಿರ್ದೇಶಕ ಅಯಾನ್ ಮುಖರ್ಜಿ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಕಾಂಬೋದಲ್ಲಿ ಡ್ಯಾನ್ಸ್ ಬಂದರೆ ಅದು ಸೂಪರ್ ಡೂಪರ್ ಹಿಟ್ ಆಗಲಿದೆ ಎಂಬುದು ಚಿತ್ರತಂಡದವರ ಲೆಕ್ಕಾಚಾರ. ಅದಕ್ಕಾಗಿ ‘ವಾರ್ 2’ ಸಿನಿಮಾದಲ್ಲಿ ಡ್ಯಾನ್ಸ್ ನಂಬರ್ ಸಾಂಗ್ ಸೇರಿಸಲಾಗುತ್ತಿದೆ. ಆ ಬಗ್ಗೆ ಚಿತ್ರತಂಡದವರು ಇನ್ನಷ್ಟೇ ಅಧಿಕೃತವಾಗಿ ತಿಳಿಸಬೇಕಿದೆ.

ಈಗಾಗಲೇ ಶೂಟಿಂಗ್ ಶುರುವಾಗಿದ್ದು, ತಮ್ಮ ಭಾಗದ ಚಿತ್ರೀಕರಣಕ್ಕಾಗಿ ಮುಂಬೈಗೆ ಜ್ಯೂ.ಎನ್‌ಟಿಆರ್ ಎಂಟ್ರಿ ಕೊಟ್ಟಿದ್ದಾರೆ. 10 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಆ್ಯಕ್ಷನ್ ಸೀನ್ಸ್‌ಗಳು ಈ ಸಿನಿಮಾದಲ್ಲಿ ಇರಲಿದೆ. ವಿಶೇಷ ಅಂದರೆ, ವಾರ್ 2ನಲ್ಲಿ ತಾರಕ್‌ಗೆ ಮತ್ತೆ ಆಲಿಯಾ ಭಟ್ ಜೋಡಿಯಾಗುತ್ತಿದ್ದಾರೆ.