ನಾನು ಡ್ರ್ಯಾಗನ್ ಎನ್ನುತ್ತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಸಮಂತಾ

ಸೌತ್ ಬ್ಯೂಟಿ ಸಮಂತಾ (Samantha) ಇದೀಗ ಮತ್ತಷ್ಟು ಬೋಲ್ಡ್ & ಬ್ಯೂಟಿಫುಲ್ ಆಗಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಈಗ ಗುಣಮುಖರಾಗುತ್ತಿದ್ದಂತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.

ಸಮಂತಾ ಖದರ್ ಬದಲಾಗಿದೆ. ಬ್ಲ್ಯಾಕ್ ಬ್ಯೂಟಿಯಾಗಿ ಮಿಂಚುತ್ತಾ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಹಾಟ್ ಫೋಟೋ ಶೇರ್ ಮಾಡಿ, ‘ಡಿಸ್ನಿಯ ರಾಜಕುಮಾರಿಯಾಗಿ ಸೋತಿದ್ದೇನೆ. ಆದರೆ ಈಗ ನಾನು ಡ್ರ್ಯಾಗನ್’ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ.‌ ಇದನ್ನೂ ಓದಿ:ಪೊಲೀಸರಿಂದ ಸ್ಥಳ ಮಹಜರು- ಸೋನು ಗೌಡ ಇದ್ದ ಕಾರಿಗೆ ಜನರ ಮುತ್ತಿಗೆ

ಸಮಂತಾ ಬ್ಯೂಟಿ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ನಾವು ಹಳೆಯ ಸಮಂತಾರನ್ನು ಕಳೆದುಕೊಂಡಿದ್ವಿ. ಈಗ ಮತ್ತೆ ಹಳೆಯ ಸ್ಯಾಮ್‌ರನ್ನು ನೋಡುತ್ತಿದ್ದೇವೆ ಎಂದು ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ.

ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸಿದ ‘ಸಿಟಾಡೆಲ್’ ಇಂಡಿಯನ್ ವರ್ಷನ್‌ನಲ್ಲಿ ‘ಹನಿ ಬನಿ’ (Honey Bunny) ಎಂಬ ಟೈಟಲ್‌ನೊಂದಿಗೆ ರಿಲೀಸ್ ಆಗುತ್ತಿದೆ. ವರುಣ್ ಧವನ್‌ಗೆ (Varun Dhawan) ನಾಯಕಿಯಾಗಿ ಸಮಂತಾ ನಟಿಸಿದ್ದಾರೆ. ಈ ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ಪುಷ್ಪ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

ಆದರೆ ಯಶೋದ ಮತ್ತು ಖುಷಿ ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ.