ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಾಂಬರ್ ಓಡಾಟ- NIAಯಿಂದ ಮತ್ತೆರಡು CCTV ದೃಶ್ಯ ಬಿಡುಗಡೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಇಂದು ಮತ್ತೆರಡು ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ.

ಪಬ್ಲಿಕ್ ಟಿವಿಗೆ ಶಂಕಿತನ ಎಕ್ಸ್‌ಕ್ಲೂಸೀವ್‌ ವೀಡಿಯೋ ಸಿಕ್ಕಿದೆ. 2.04 ನಿಮಿಷಕ್ಕೆ ಬಿಬಿಎಂಟಿಸಿ ಬಸ್ ಹತ್ತಿರುವ ಶಂಕಿತ, 3.40 ಕ್ಕೆ ಗೊರಗುಂಟೆಪಾಳ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಇಲ್ಲಿಂದ ಹುಮ್ನಾಬಾದ್ ಬಸ್‍ನಲ್ಲಿ ಬಳ್ಳಾರಿ ಕಡೆ ಶಂಕಿತ ಪಯಣ ಮಾಡಿದ್ದಾನೆ. ರಾತ್ರಿ 9 ಗಂಟೆಗೆ ಬಳ್ಳಾರಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ, ಓರ್ವ ವಶಕ್ಕೆ – ಏನಿದು ಐಸಿಸ್‌ ಬಳ್ಳಾರಿ ಮಾಡ್ಯೂಲ್‌?

ಬಳ್ಳಾರಿ ಬಸ್‍ನಿಲ್ದಾಣದಲ್ಲೂ ಬಾಂಬರ್ ಓಡಾಡಿದ್ದಾನೆ. ಬಸ್‌ ನಿಲ್ದಾಣದಲ್ಲಿ ಶಂಕಿತ ಆ ಕಡೆಯಿಂದ ಈ ಕಡೆಗೆ ಸಿಸಿಟಿವಿಯನ್ನು ಗಮನಿಸಿಕೊಂಡು ಓಡಾಡಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಬಳ್ಳಾರಿಯ ಪೊಲೀಸ್ ಚೌಕಿ ಮುಂದೆಯೇ ಶಂಕಿತ ಓಡಾಟ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ- ನಾಲ್ವರನ್ನು ವಶಕ್ಕೆ ಪಡೆದ NIA