ಕನ್ನಡಕ್ಕೆ ಎಂಟ್ರಿ ಕೊಟ್ಟ ತೆಲುಗಿನ ಲಕ್ಷ್ಮಿ ಮಂಚು

ತೆಲುಗಿನ ಹೆಸರಾಂತ ನಟ ಮೋಹನ್ ಬಾಬು (Mohan Babu) ಪುತ್ರಿ ಲಕ್ಷ್ಮಿ ಮಂಚು (Lakshmi Manchu) ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರುವ ‘ಆದಿಪರ್ವ’ (Adiparva) ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಸದ್ಯ ಶಕ್ತಿ ರೂಪ ತಾಳಿರುವ ಲಕ್ಷ್ಮಿ ಮಂಚು ಪೋಸ್ಟರ್ ಲುಕ್ ರಿಲೀಸ್ ಆಗಿದೆ.

ನಟಿ, ನಿರೂಪಕಿ ಲಕ್ಷ್ಮಿ ಮಂಚು ಸದಾ ಒಂದಲ್ಲಾ ಒಂದು ಹೊಸ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರು ಜನಕ್ಕೆ ಕನೆಕ್ಟ್ ಆಗುವಂತಹ ಪಾತ್ರಗಳಲ್ಲಿ ನಟಿ ಕಾಣಿಸಿಕೊಳ್ತಾರೆ. ಸದ್ಯ ಶಕ್ತಿದೇವಿಯ ಕಥೆ ಹೇಳೋಕೆ ನಟಿ ಸಜ್ಜಾಗಿದ್ದಾರೆ.

‘ಆದಿಪರ್ವ’ ಚಿತ್ರದಲ್ಲಿ ಲಕ್ಷ್ಮಿ ಮಂಚು ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದ ಪೋಸ್ಟರ್ ನೋಡಿದ್ರೆ ಸಾಕ್ಷಾತ್ ದೇವಿಯಂತೆಯೇ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ನಟಿಯ ಲುಕ್ ನೋಡುಗರ ಮನಮುಟ್ಟಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರಿಯಲ್ ಸ್ಟಾರ್

‘ಆದಿಪರ್ವ’ ಸಿನಿಮಾವನ್ನ ಸಂಜೀವ ಕುಮಾರ್ ಮೇಗೋಟಿ ಡೈರೆಕ್ಷನ್ ಮಾಡಿದ್ದಾರೆ. ಸೀರಿಯಲ್, ಸಿನಿಮಾ ಅಂತ ಈಗಾಗಲೇ ಇವರು ಕೆಲಸ ಮಾಡಿದ್ದಾರೆ.