ತಲೈವ ಪಾತ್ರಕ್ಕೆ ಧ್ವನಿ ಕೊಟ್ಟ ಸಾಯಿಕುಮಾರ್

ಶ್ವರ್ಯ ರಜನಿಕಾಂತ್ ನಿರ್ದೇಶನದ ‘ಲಾಲ್ ಸಲಾಮ್’ (Lal Salaam) ಸಿನಿಮಾ ಇದೇ ಫೆ.9ರಂದು ರಿಲೀಸ್ ಆಗಲಿದೆ. ಮಗಳ ಸಿನಿಮಾದಲ್ಲಿ ತಲೈವ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ರಿಲೀಸ್‌ಗೆ ಸಜ್ಜಾಗಿರೋ ವೇಳೆ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ನಟ ಸಾಯಿಕುಮಾರ್ (Saikumar) ಅವರು ರಜನಿಕಾಂತ್ (Rajanikanth) ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

‘ಲಾಲ್ ಸಲಾಮ್’ ಅಪ್ಪಟ ತಮಿಳು ಸಿನಿಮಾ. ತಮಿಳಿನ ಜೊತೆಗೆ ತೆಲುಗಿನಲ್ಲೂ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ತೆಲುಗು ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿದೆ. ತೆಲುಗು ವರ್ಷನ್‌ನಲ್ಲಿ ರಜನಿಕಾಂತ್ (Rajanikanth) ಪಾತ್ರಕ್ಕೆ ಸಾಯಿಕುಮಾರ್ ಧ್ವನಿ ನೀಡಿದ್ದಾರೆ. ಅವರ ಖಡಕ್ ವಾಯ್ಸ್ ಪಾತ್ರದ ತೂಕವನ್ನು ಹೆಚ್ಚಿಸಿದೆ. ಇದನ್ನೂ ಓದಿ:‘ಮಂಡ್ಯ ಹೈದ’ನ ಜೊತೆ ಪ್ರತಿಭಾನ್ವಿತ ನಿರ್ದೇಶಕ ವಿ. ಶ್ರೀಕಾಂತ್ ಆಗಮನ

ಇಷ್ಟು ವರ್ಷಗಳ ಕಾಲ ರಜನಿಕಾಂತ್ (Rajanikanth) ಸಿನಿಮಾಗಳು ತೆಲುಗಿಗೆ ಡಬ್ ಆದಾಗ ಅವರ ಪಾತ್ರಕ್ಕೆ ಗಾಯಕ ಮನೋ ಅವರು ಧ್ವನಿ ನೀಡುತ್ತಿದ್ದರು. ಅವರ ವಾಯ್ಸ್‌ಗೆ ಅಲ್ಲಿನ ಫ್ಯಾನ್ಸ್ ಅಡ್ಜಸ್ಟ್ ಆಗಿದ್ದರು. ಈಗ ಆ ಜಾಗಕ್ಕೆ ಸಾಯಿಕುಮಾರ್ ಅವರನ್ನು ತಂದಿದ್ದು ಕೆಲವರಿಗೆ ಬೇಸರ ಇದೆ. ಆದರೆ ಇನ್ನೂ ಕೆಲವರಿಗೆ ಸಾಯಿ ಕುಮಾರ್ ಅವರ ಖಡಕ್ ವಾಯ್ಸ್‌ನಲ್ಲಿ ಡೈಲಾಗ್ ಕೇಳಿ ಖುಷಿ ಆಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

‘ಲಾಲ್ ಸಲಾಮ್‌’ ಸಿನಿಮಾ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುವ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ಹೇಳಲಿದೆ. ಈ ಬಗ್ಗೆ ಟ್ರೈಲರ್‌ನಲ್ಲಿ ಸುಳಿವು ನೀಡಲಾಗಿದೆ. ಎಲ್ಲ ದೇವರೂ ಒಂದೇ ಎನ್ನುವ ಡೈಲಾಗ್ ಹೈಲೈಟ್ ಆಗಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಇದೆ. ತಲೈವ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

‘ಲಾಲ್ ಸಲಾಮ್‌’ ಚಿತ್ರದಲ್ಲಿ ತಲೈವಾ ಅತಿಥಿಯಾಗಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.