ಅಯೋಧ್ಯೆ ಕಡೆಗೆ ರಾಮಭಕ್ತರು – ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಶ್ರೀರಾಮ.. ಜಯರಾಮ..’ ಹಾಡಿಗೆ ಯುವತಿ ನೃತ್ಯ

ಬೆಂಗಳೂರು: ಅಯೋಧ್ಯೆಗೆ (Ayodhya) ಪ್ರಯಾಣ ಬೆಳೆಸುವ ಮುನ್ನ ಬೆಂಗಳೂರು ವಿಮಾನ ನಿಲ್ದಾಣದ (Bengaluru Airport) ಟರ್ಮಿನಲ್‌-2ನಲ್ಲಿ (Terminal 2) ‘ಶ್ರೀರಾಮ.. ಜಯರಾಮ..’ ಹಾಡಿಗೆ ಯುವತಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್, ಸೋಷಿಯಲ್‌ ಮೀಡಿಯಾದ ಎಕ್ಸ್‌ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದೆ. ಟರ್ಮಿನಲ್‌ 2 ನಲ್ಲಿ ವಿಮಾನ ಪ್ರಯಾಣಕ್ಕಾಗಿ ಕುಳಿತಿರುವ ತಂಡವು ತಾಳ ಹಾಕುತ್ತಾ ‘ಶ್ರೀರಾಮ.. ಜಯರಾಮ..’ ಹಾಡು ಹಾಡಿದ್ದಾರೆ. ಲಯಕ್ಕೆ ತಕ್ಕಂತೆ ಯುವತಿ ನೃತ್ಯ ರೂಪಕ ಪ್ರದರ್ಶಿಸಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ರಾಜರಾಮ ‘ದರ್ಬಾರ್’ ಈ ವರ್ಷದ ಅಂತ್ಯದಲ್ಲಿ ಪೂರ್ಣ

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಬಳಿಕ ದೇಶಾದ್ಯಂತ ಭಗವಾನ್‌ ರಾಮಭಕ್ತರು ಅಯೋಧ್ಯೆ ಕಡೆಗೆ ಮುಖ ಮಾಡಿದ್ದಾರೆ. ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಇದುವರೆಗೆ ಲಕ್ಷಾಂತರ ಮಂದಿ ರಾಮಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಜ.22 ರಂದು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಶಾಸ್ತ್ರೋಕ್ತವಾಗಿ ಜರುಗಿತು. ಇದನ್ನೂ ಓದಿ: 25 ಲಕ್ಷ ಜನರಿಂದ ಬಾಲಕ ರಾಮನ ದರ್ಶನ – 11 ಕೋಟಿ ರೂ. ಕಾಣಿಕೆ ಸಂಗ್ರಹ