ಹೇಮಂತ್ ಸೋರೆನ್ ಅರೆಸ್ಟ್ – ಚಂಪಾಯಿ ಸೋರೆನ್ ಮುಂದಿನ ಜಾರ್ಖಂಡ್ ಸಿಎಂ

ರಾಂಚಿ: ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಬಂಧಿಸವುದು ಖಚಿತವಾಗುತ್ತಲೇ ಆಡಳಿತ ಪಕ್ಷದ ಶಾಸಕರು ಸಭೆ ನಡೆಸಿ, ಹೇಮಂತ್ ಸೋರೆನ್ ಆಪ್ತ, ಸಚಿವ ಚಂಪಾಯಿ ಸೋರೆನ್‍ರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಿರುವ ಆಡಳಿತ ಪಕ್ಷದ ಶಾಸಕರು, ಚಂಪಾಯಿ ಸೋರೆನ್‍ರನ್ನು (Champai Soren) ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಿದ್ದಾರೆ. ಗುರುವಾರ ಚಂಪಾಯಿ ಸೋರೇನ್ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಸಂಭವ ಇದೆ.

ಸೋರೆನ್ ಅರೆಸ್ಟ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಸೋರೆನ್ (Hemant Soren) ಅವರನ್ನು ಬುಧವಾರ ಸಂಜೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಭಾರೀ ಭದ್ರತೆ ನಡುವೆ ರಾಂಚಿಯ ಸಿಎಂ ನಿವಾಸಕ್ಕೆ ಮಧ್ಯಾಹ್ನ ಬಂದ ಇ.ಡಿ ಅಧಿಕಾರಿಗಳು ಸತತ 8 ಗಂಟೆ ವಿಚಾರಣೆ ನಡೆಸಿ ಬಂಧನ ಮಾಡಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಜಾರ್ಖಂಡ್‌ ಸಿಎಂ ಸೊರೆನ್‌ ಅರೆಸ್ಟ್‌

ಇತ್ತ ಸೋರೆನ್ ಬಂಧನಕ್ಕೆ ಜೆಎಂಎಂ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸ, ರಾಜಭವನ, ಇಡಿ ಕಚೇರಿ ಬಳಿ ನಿಷೇಧಾಜ್ಞೆ ವಿಧಿಸಲಾಗಿದೆ. ರಾಂಚಿ ಭದ್ರತೆಗೆ 7 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇಡಿ ಅಧಿಕಾರಿಗಳ ವಿರುದ್ಧ ಹೇಮಂತ್ ಸೋರೆನ್ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.