ಸೆಕ್ಸ್‌ಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದಳು!

ಲಕ್ನೋ: ಸೆಕ್ಸ್‌ಗೆ ಸಹಕರಿಸುವಂತೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಪತ್ನಿ (Husband- Wife Fight) ಕಚ್ಚಿ ಗಾಯಗೊಳಿಸಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

ಹಮೀರ್‌ಪುರ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮು ನಿಶಾದ್ (34) ಗಾಯಗೊಂಡ ಪತಿ. ಪತ್ನಿಯ ಕೃತ್ಯದಿಂದ ನಿಶಾದ್‌ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ!

ನಡೆದಿದ್ದೇನು..?: ಜನವರಿ 28ರಂದು ಸೆಕ್ಸ್‌ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದಗಳು ನಡೆದಿವೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ರೊಚ್ಚಿಗೆದ್ದ ಪತ್ನಿ, ಪತಿಯ ಖಾಸಗಿ ಅಂಗವನ್ನೇ ಕಚ್ಚಿದ್ದಾಳೆ. ಬಳಿಕ ತಪ್ಪಿನ ಅರಿವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇತ್ತ ಪತ್ನಿಯ ಕೃತ್ಯದಿಂದ ನಿಶಾದ್‌ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಸೆಕ್ಸ್‌ ಮಾಡುವಂತೆ ಒತ್ತಾಯಿಸಿದ್ದರಿಂದ ಬೇಸರಗೊಂಡಿರುವುದಾಗಿ ಪತ್ನಿ ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಅನೂಪ್ ಸಿಂಗ್ ತಿಳಿಸಿದ್ದಾರೆ.