ಇಂದು ಹಾಸ್ಯನಟ ನಾಗಭೂಷಣ್ ಮದುವೆ

ನ್ನಡದ ಹೆಸರಾಂತ ಹಾಸ್ಯ ನಟ ನಾಗಭೂಷಣ್ (Nagabhushan) ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ, ನಟಿ ಪೂಜಾ ಪ್ರಕಾಶ್ (Pooja Prakash) ಜೊತೆ ಇಂದು ಬೆಳಗಾವಿಯಲ್ಲಿ ಅವರು ಮದುವೆ (marriage) ಆಗುತ್ತಿದ್ದಾರೆ. ಡಾಲಿ ಧನಂಜಯ್ ಸೇರಿದಂತೆ ಹಲವಾರು ಕಲಾವಿದರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

ಟಗರು ಪಲ್ಯ ಸೇರಿದಂತೆ ಅನೇಕ ಚಿತ್ರಗಳಿಗೆ ನಾಯಕನಾಗಿ ನಟಿಸಿರುವ ನಾಗಭೂಷಣ್, ನಾನಾ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಇವರ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ.

 

ನಾಗಭೂಷಣ್ ಮದುವೆ ಆಗುತ್ತಿರುವ ಪೂಜಾ ಪ್ರಕಾಶ್ ಚಿತ್ರಕಲೆ ಮತ್ತು ಗ್ರಾಫಿಕ್ಸ್ ಡಿಸೈನ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದು ಬೆಳಗಾವಿಯಲ್ಲಿ ಇವರ ವಿವಾಹ ನಡೆಯಲಿದ್ದು, ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.