ತೆಲಂಗಾಣದಲ್ಲಿ 12,400 ಕೋಟಿ ಹೂಡಿಕೆ: ಅದಾನಿ ಗ್ರೂಪ್‌ ಘೋಷಣೆ

ಹೈದರಾಬಾದ್: ಮುಂದಿನ ದಶಕದಲ್ಲಿ ತನ್ನ ಏಳು ಟ್ರಿಲಿಯನ್ ರೂಪಾಯಿ ವೆಚ್ಚದ ಯೋಜನೆಯ ಭಾಗವಾಗಿ ತೆಲಂಗಾಣದಲ್ಲಿ (Telangana) 12,400 ಕೋಟಿ ರೂಪಾಯಿಗಳಿಗಿಂತ ಹೆಚ್ಚು (1.49 ಶತಕೋಟಿ ಡಾಲರ್) ಹೂಡಿಕೆ ಮಾಡುವುದಾಗಿ ಅದಾನಿ ಗ್ರೂಪ್ ಬುಧವಾರ ತಿಳಿಸಿದೆ.

ವಿಶ್ವ ಆರ್ಥಿಕ ವೇದಿಕೆ-2024 ರಲ್ಲಿ ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಗ್ರೂಪ್‌ ಬಹುಕೋಟಿ ರೂಪಾಯಿ ಮೊತ್ತದ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿದೆ. ಇದನ್ನೂ ಓದಿ: ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ‌ ಟ್ರಕ್‌ ಅಗ್ನಿಗಾಹುತಿ!

ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನ ಹೂಡಿಕೆಯು 50 ಶತಕೋಟಿ ರೂಪಾಯಿಗಳಿಗೆ ಸ್ಥಾಪಿಸಲು 100 ಮೆಗಾವ್ಯಾಟ್ ಡೇಟಾ ಕೇಂದ್ರವನ್ನೂ ಒಳಗೊಂಡಿದೆ. ಅದಾನಿ ಗ್ರೀನ್ ಎನರ್ಜಿ, ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಟೆಕ್ನಾಲಜೀಸ್ ರಾಜ್ಯದಲ್ಲಿ ಯೋಜನೆಗಳನ್ನು ಜಾರಿಗೆ ತರುವ ಒಪ್ಪಂದಗಳಿಗೆ ಸಹಿ ಹಾಕಿವೆ.

ಇಂಧನ ಕ್ಷೇತ್ರದಲ್ಲಿ ಅದಾನಿ ಎನರ್ಜಿ ತೆಲಂಗಾಣದಲ್ಲಿ 5 ಸಾವಿರ ಕೋಟಿ ರೂ., ಅಂಬುಜಾ ಸಿಮೆಂಟ್‌ ತಯಾರಿಕೆಗೆ 1,400 ಕೋಟಿ ರೂ. ಹೂಡಿಕೆ ಮಾಡಲಿದೆ. ಇದನ್ನೂ ಓದಿ: ಕೇರಳದ ಶ್ರೀಕೃಷ್ಣ ದೇವಾಲಯದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ

ಅಷ್ಟೇ ಅಲ್ಲದೇ, 1,000 ಕೋಟಿ ರೂ. ವೆಚ್ಚದಲ್ಲಿ ಡ್ರೋನ್‌ ಮತ್ತು ಕ್ಷಿಪಣಿ ವ್ಯವಸ್ಥೆ ಸಂಶೋಧನೆ, ಅಭಿವೃದ್ಧಿ ಮತ್ತು ವಿನ್ಯಾಸ ಘಟಕ ಸ್ಥಾಪಿಸುವ ಪ್ರಸ್ತಾವನೆಯೂ ಇದೆ.