ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ನವರು ಬರೋದು ರಾಮನಿಗೂ ಇಷ್ಟವಿಲ್ಲ: ಸಿ.ಟಿ ರವಿ

ಬೆಂಗಳೂರು: ರಾಮಮಂದಿರ (Ram Mandir) ಉದ್ಘಾಟನೆಗೆ ಕಾಂಗ್ರೆಸ್‌ನವರು (Congress) ಬರೋದು ರಾಮನಿಗೂ ಇಷ್ಟವಿಲ್ಲ. ಎಲ್ಲವೂ ರಾಮನಿಚ್ಛೆಯಂತೆ ನಡೆದಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ವ್ಯಂಗ್ಯವಾಡಿದ್ದಾರೆ.

ಅಯೋಧ್ಯೆ (Ayodhya) ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಬರಲ್ಲ ಎಂದು ಹೇಳಿದ ವಿಚಾರದ ಕುರಿತು ಮಾತನಾಡಿದ ಅವರು, ಏನಾಗುತ್ತೋ ಅದು ಒಳ್ಳೆಯದಕ್ಕೇ. ಕಾಂಗ್ರೆಸ್‌ನವರು ಉದ್ಘಾಟನೆಗೆ ಹೋಗಬಾರದು ಅನ್ನೋದು ರಾಮನ ಇಚ್ಛೆ. ಕಾಂಗ್ರೆಸಿಗರು ಬರೋದು ಬೇಡ ಎಂದು ರಾಮನಿಗೂ ಅನಿಸಿರಬಹುದು. ನಾವು ಯಾವ ಮುಖ ಇಟ್ಕೊಂಡು ಹೋಗೋದು ಎಂದು ಕಾಂಗ್ರೆಸ್‌ಗೂ ಅನಿಸಿರಬಹುದು. ಎಲ್ಲವೂ ರಾಮನಿಚ್ಛೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಏಕನಾಥ್‌ ಶಿಂಧೆ ಬಣ ನಿಜವಾದ ಶಿವಸೇನೆ – ಮಹಾರಾಷ್ಟ್ರ ಸ್ಪೀಕರ್‌

ರಾಮಸೇತು, ರಾಮ ಎಲ್ಲವೂ ಕಾಲ್ಪನಿಕ ಎಂದು ಕಾಂಗ್ರೆಸ್ ಹೇಳಿತ್ತು. ಹೀಗಾಗಿ ಇದು ರಾಮನ ಇಚ್ಛೆ. ನಿಮಗೆ ಮುಸ್ಲಿಂ ಲೀಗ್ ಕರೆಯುವ ದಾವತ್‌ಗೆ (ಔತಣ) ಹೋಗಬಹುದು. ಆದರೆ ರಾಮನ ಪ್ರಾಣಪ್ರತಿಷ್ಠೆಗೆ ಹೋಗಲು ಆಗೋದಿಲ್ಲ. ಆಗುವುದೆಲ್ಲಾ ಒಳ್ಳೆಯದಕ್ಕೆ. ಎಲ್ಲವೂ ರಾಮನ ಇಚ್ಛೆಯಂತೆ ಆಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದವರು ನಿಜಬಣ್ಣವನ್ನು ಮತ್ತೊಮ್ಮೆ ದೇಶದ ಮುಂದೆ ತೆರೆದಿಟ್ಟಿದ್ದಾರೆ: ವಿಜಯೇಂದ್ರ