‘ಅನಿಮಲ್’ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಕೆನ್ನೆಗೆ ಮುತ್ತಿಟ್ಟ ರಣ್‌ಬೀರ್ ಕಪೂರ್

ನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಅನಿಮಲ್’ ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿರೋ ರಶ್ಮಿಕಾಗೆ ಕೆನ್ನೆಗೆ ರಣ್‌ಬೀರ್ ಕಪೂರ್ ಮುತ್ತಿಟ್ಟಿದ್ದಾರೆ.

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್‌ನಲ್ಲಿ ಅದೃಷ್ಟ ಖುಲಾಯಿಸಿದೆ. ‘ಅನಿಮಲ್’ (Animal) ಸಿನಿಮಾ ಸಕ್ಸಸ್ ಆದ್ಮೇಲೆ ಅವರ ರೇಂಜ್ ಬದಲಾಗಿದೆ. ಸದ್ಯ ಸಿನಿಮಾ 500ಕ್ಕೂ ಅಧಿಕ ಕೋಟಿ ಬಾಚಿರುವ ಖುಷಿಯಲ್ಲಿ ಚಿತ್ರತಂಡ ಮುಂಬೈನ ಖಾಸಗಿ ಹೋಟೆಲ್‌ವೊಂದರಲ್ಲಿ ಸಕ್ಸಸ್ ಪಾರ್ಟಿ ಮಾಡಿದೆ.

ಈ ವೇಳೆ, ರಶ್ಮಿಕಾ ಮಂದಣ್ಣ ಅವರು ಕಪ್ಪು ಬಣ್ಣದ ಡ್ರೆಸ್ ತೊಟ್ಟು ಸಖತ್ ಹಾಟ್ ಆಗಿಯೇ ಅನಿಮಲ್ ಸಕ್ಸಸ್ ಪಾರ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ರಶ್ಮಿಕಾರನ್ನು ನೋಡುತ್ತಿದ್ದಂತೆಯೇ ರಣ್‌ಬೀರ್ (Ranbir Kapoor) ತಬ್ಬಿಕೊಂಡು ಮುದ್ದಾಡಿದ್ದಾರೆ. ನಟಿಯ ಕೆನ್ನೆಗೆ ರಣ್‌ಬೀರ್ ಕಿಸ್ ಮಾಡಿದ್ದಾರೆ. ಈ ಕುರಿತ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ನಟಿ ರಶ್ಮಿಕಾ, ‘ಪುಪ್ಪ 2’ (Pushpa 2) ಸಿನಿಮಾ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ‘ಅನಿಮಲ್’ ಸಕ್ಸಸ್ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.