ಸಿದ್ದರಾಮಯ್ಯ ಅವರನ್ನ ನಾನೂ ದೇವರೆಂದು ನೋಡುತ್ತೇನೆ: ಸತೀಶ್‌ ಜಾರಕಿಹೊಳಿ

ಚಿಕ್ಕೋಡಿ: ಸಿದ್ದರಾಮಯ್ಯ (Siddaramaiah) ಅವರನ್ನ ನಾನೂ ದೇವರೆಂದು ನೋಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ಬೆಳಗಾವಿಯ (Belagavi) ಹುಕ್ಕೇರಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಬಳಿಕ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ಕಾರ್ಯಕರ್ತರಂತೆ ನಾನು ಕೂಡ ಅವರನ್ನ ದೇವರೆಂದು ನೋಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ 105 ಕೋಟಿ ರೂ. ಅಲ್ಪ ಪರಿಹಾರ ಘೋಷಣೆ ಅರೆಕಾಸಿನ ಮಜ್ಜಿಗೆಗೂ ಸಾಲಲ್ಲ: ಬೊಮ್ಮಾಯಿ

ಅವರವರ ನಾಯಕರನ್ನ ಭಕ್ತಿಪೂರ್ವಕವಾಗಿ ದೇವರ ರೂಪದಲ್ಲಿ ನೋಡುತ್ತಾರೆ. ದೇವರ ರೂಪದಲ್ಲಿ ನೋಡಲು ತಪ್ಪೇನಿಲ್ಲ. ದೇವರೇ ಬೇರೆ ಮನುಷ್ಯರೇ ಬೇರೆ. ಮೋದಿ, ಯಡಿಯೂರಪ್ಪ, ದೇವೆಗೌಡ  ಅವರನ್ನ ಅವರ ಕಾರ್ಯಕರ್ತರು ದೇವರು ಎಂದು ನೋಡುತ್ತಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ಮಾಡಲು ಕಿತ್ತಾಟದ ವಿಚಾರವಾಗಿ ಮಾತನಾಡಿದ ಅವರು, ನಾವು ಸಭೆ ನಡೆಸಿದ್ದು ನಿಜ. ಸಭೆಯಲ್ಲಿ ಡಿಸಿಎಂ ಸ್ಥಾನ ಕೇಳುವ ವಿಚಾರ ಚರ್ಚೆ ಆಗಿಲ್ಲ. ಡಿಸಿಎಂ ಆಗಬೇಕು ಎಂದು ಯಾರೂ ಕೇಳೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಕ್ರಂ ಸಿಂಹ ಅಂಕಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಒಬ್ಬರದ್ದೇ.. ಅವರೇ ಶ್ರೀಮನ್ ಸಿದ್ದರಾಮಣ್ಣ: ಹೆಚ್‌ಡಿಕೆ ಟಾಂಗ್‌

ಒಂದು ವರ್ಷದಲ್ಲಿ ಸರ್ಕಾರ ಪತನವಾಗುತ್ತೆ ಎನ್ನುವ ಹೆಚ್.ಡಿ.ದೇವೆಗೌಡ ಬಗ್ಗೆ ಪ್ರತಿಕ್ರಿಯಿಸಿ, ಆರಂಭದಿಂದಲೂ ಅವರು ಹೀಗೆ ಹೇಳುತ್ತಿದ್ದಾರೆ. ಆದರೂ ಸರ್ಕಾರ ಎಂದರೆ ತೂಗುಗತ್ತಿ ಇದ್ದ ಹಾಗೆ ನಡೀತಾನೇ ಇರುತ್ತೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಹಿಂದೂಗಳನ್ನ ಟಾರ್ಗೆಟ್‌ ಮಾಡ್ತಿದೆ ಎಂಬ ಆರೋಪ ಕುರಿತು ಮಾತನಾಡಿ, ಒಬ್ಬರ ಮೇಲೆ ಕೇಸ್ ಹಾಕಿದರೆ ಎಲ್ಲಾ ಹಿಂದೂಗಳ ಮೇಲೆ ಎನ್ನಲು ಆಗುವುದಿಲ್ಲ. ಕೇಸ್ ವಿಚಾರದಲ್ಲಿ ಹಿಂದೂ ಎಂದು ಹೇಳಲು ಆಗುವುದಿಲ್ಲ. ಕೇಸ್ ವಿಚಾರಕ್ಕೆ ಅಂತಿಮವಾಗಿ ನ್ಯಾಯಾಲಯ ತೀರ್ಪು ನೀಡುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡಗೆ ಜಾಮೀನು

ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆಯಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಹ್ವಾನ ಕೊಟ್ಟಿರುವುದರ ಬಗ್ಗೆ ಬಿಜೆಪಿ ಅವರನ್ನೇ ಕೇಳಬೇಕು. ರಾಮಮಂದಿರ ಉದ್ಘಾಟನೆಗೆ ಬಿಜೆಪಿ ಅವರು ಆಹ್ವಾನ‌ ಕೊಟ್ಟಿದ್ದರೆ‌ ನಾವು ಹೋಗುತ್ತಿದ್ದೆವು ಎಂದು ತಿಳಿಸಿದ್ದಾರೆ.