ಕೆಂಪು ಬಣ್ಣದ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಹಾಟ್‌ ಫೋಟೋಶೂಟ್‌

ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣದ ಡ್ರೆಸ್‌ನಲ್ಲಿ ನಟಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಶ್ರೀದೇವಿ (Sridevi) ಪುತ್ರಿಯ ನಯಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ನಟಿ ಜಾನ್ವಿ, ಆಗಾಗ ಗಮನ ಸೆಳೆಯುತ್ತಲೇ ಇರುತ್ತಾರೆ. ಇದರ ನಡುವೆ ಈಗೀನ ಹೊಸ ಅವತಾರ ಪಡ್ಡೆಹುಡುಗರ ನಿದ್ದೆ ಕೆಡಿಸುತ್ತಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಪ್ರೇಕ್ಷಕರಿಗೆ ಗುಡ್ ನ್ಯೂಸ್- ಇಲ್ಲಿದೆ ಬಿಗ್ ಸರ್ಪ್ರೈಸ್

ಕೆಂಪು ಬಣ್ಣದ ಡ್ರೆಸ್‌ನಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೈಟ್ ಆಗಿರೋ ಟಾಪ್ ಧರಿಸಿ ಮಸ್ತ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಗ್ಲ್ಯಾಮರಸ್‌ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

2018ರಲ್ಲಿ ‘ಧಡಕ್’ ಸಿನಿಮಾ ಮೂಲಕ ನಾಯಕಿಯಾಗಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಎಂಟ್ರಿ ಕೊಟ್ಟರು. ಬಳಿಕ ಮಿಲಿ, ರೂಹಿ, ಗುಡ್ ಲಕ್ ಜೆರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಇದನ್ನೂ ಓದಿ:ನಿರ್ದೇಶಕನ ಹೆಸರನ್ನೇ ಕಿತ್ತಾಕಿದ ನಿರ್ಮಾಪಕ: ‘ಡೆವಿಲ್’ ವಿವಾದ

ಅದರಲ್ಲಿ ಈ ವರ್ಷ ತೆರೆಕಂಡ ‘ಬಾವಲ್’ ಸಿನಿಮಾ ಸೌಂಡ್ ಮಾಡಿತ್ತು. ಜಾನ್ವಿ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ವರುಣ್ ಧವನ್- ಜಾನ್ವಿ ಕೆಮಿಸ್ಟ್ರಿ ಕೂಡ ಚಿತ್ರದಲ್ಲಿ ಕ್ಲಿಕ್ ಆಗಿತ್ತು.

ಇನ್ನೂ ತಾಯಿ ಶ್ರೀದೇವಿ ಕಪೂರ್ (Sridevi Kapoor) ಬಹುಭಾಷೆಗಳಲ್ಲಿ ನಟಿಸುವ ಮೂಲಕ ಸಾಕಷ್ಟು ವರ್ಷಗಳು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ತಾಯಿಯಂತೆ ತಾನು ಕೂಡ ದೊಡ್ಡ ಸ್ಟಾರ್ ಆಗಿ ಮಿಂಚಬೇಕು ಎಂದು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕಾಗಿಯೇ ಹಿಂದಿ ಮಾತ್ರವಲ್ಲ ತೆಲುಗು ಸಿನಿಮಾಗಳಲ್ಲಿ ನಟಿ ಅಭಿನಯಿಸುತ್ತಿದ್ದಾರೆ.

ತೆಲುಗಿನ ‘ದೇವರ’ (Devara) ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಈ ಚಿತ್ರ ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ.

ಜಾನ್ವಿ ಸಹೋದರಿ ಖುಷಿ ಕಪೂರ್ (Kushi Kapoor) ಕೂಡ ನಾಯಕಿಯಾಗಿ ಮಿಂಚಲು ಅಖಾಡಕ್ಕೆ ಹೆಜ್ಜೆ ಇಟ್ಟಾಗಿದೆ. ‘ದಿ ಆರ್ಚೀಸ್’ ಎಂಬ ಸಿನಿಮಾದಲ್ಲಿ ಈಗಾಗಲೇ ನಟಿಸಿದ್ದಾರೆ.