ಮಂಡ್ಯ ಬಸ್ ಹತ್ತುವಾಗ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು

ಮಂಡ್ಯ: ಬಸ್ ಹತ್ತುವ ವೇಳೆ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಡ್ಯದ (Mandya) ಕೆಎಸ್‍ಆರ್‌ಟಿಸಿ (KSRTC) ಬಸ್ (BUS) ನಿಲ್ದಾಣದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಬೆಂಗಳೂರು ಮೂಲದ ಪೂಜಾ ಎಂದು ಗುರುತಿಸಲಾಗಿದೆ. ಮಹಿಳೆ ವೇಗವಾಗಿ ಬಂದ ಬಸ್‌ನಿಂದಾಗಿ ಗಾಬರಿಗೊಂಡ ಪರಿಣಾಮ ಚಕ್ರಕ್ಕೆ ಸಿಲುಕಿದ್ದಾಳೆ ಎನ್ನಲಾಗಿದೆ. ಘಟನೆಯಲ್ಲಿ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಇದನ್ನೂ ಓದಿ: ಭದ್ರಾವತಿ ಬಿಜೆಪಿ ಕಾರ್ಯಕರ್ತನ ಕಾರು ಜಖಂ – ಮೂವರು ಆರೋಪಿಗಳು ಅರೆಸ್ಟ್

ಘಟನಾ ಸ್ಥಳಕ್ಕೆ ಮಂಡ್ಯ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶಾರೂಖ್, ಅಕ್ಷಯ್, ಅಜಯ್ ದೇವಗನ್‌ಗೆ ಕೇಂದ್ರ ಸರ್ಕಾರ ನೋಟಿಸ್