ಒಂದು ಚುನಾವಣೆ ಗೆಲ್ಲೋಕೆ ಒಬ್ಬರ ಜೀವದ ಜೊತೆ ಆಟವಾಡೋದು ಸರಿಯಲ್ಲ: ಬಿಜೆಪಿ ವಿರುದ್ಧ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಬೆಂಗಳೂರು: ಒಂದು ಚುನಾವಣೆ ಗೆಲ್ಲೋಕೆ ಒಬ್ಬರ ಜೀವದ ಜೊತೆ ಆಟವಾಡೋದು ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಕೋರ್ಟ್ ರಿಲೀಫ್ ನೀಡಿದ ವಿಚಾರ‌ವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಯವರಿಗೆ ನಾಚಿಕೆ ಆಗಬೇಕು.‌ ಒಂದು ಚುನಾವಣೆ ಗೆಲ್ಲಲಿಕ್ಕೆ ಒಬ್ಬರ ಜೀವನದ ಜೊತೆಗೆ ಆಟ ಆಡ್ತೀರಾ? ಡಿಕೆಶಿಯವರನ್ನು ಕಟ್ಟಿ ಹಾಕಬೇಕು ಅಂತ ಎಷ್ಟು ಬೇಗ ಫೈಲ್ ಮೂವ್ ಮಾಡಿದ್ರಿ? ಕೇವಲ ಮೌಖಿಕ ಆದೇಶ ನೀಡಿ ಸಿಬಿಐಗೆ ನೀಡಿದ್ರಿ. ಇದನ್ನು ರಾಜಕೀಯ ಪ್ರೇರಿತ ಎನ್ನದೇ ಬೇರೆ ಏನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಕೀಲನಾಗಿದ್ದರಿಂದಲೇ ಕಾನೂನು ಬಾಹಿರ ತನಿಖೆಯ ಆದೇಶ ವಾಪಸ್: ಸಿದ್ದರಾಮಯ್ಯ

ಅವತ್ತು ಏನೇನೋ ಪೋಸ್ಟ್ ಹಾಕುತ್ತಿದ್ದವರು ಈಗ ಏನು ಉತ್ತರ ಕೊಡ್ತೀರಾ? ಸಿಬಿಐ ಮಾನದಂಡದ ಪ್ರಕಾರ ಅವತ್ತು ಎಫ್ಐಆರ್ ಇತ್ತಾ ಇಲ್ವಾ, ಅಷ್ಟೇ ಉತ್ತರ ಹೇಳಲಿ ಬಿಜೆಪಿಯವರು ಎಂದು ಪ್ರಿಯಾಂಕ್‌ ಖರ್ಗೆ ಗುಡುಗಿದ್ದಾರೆ.

ಒಂದೇ ತಾಸಿನಲ್ಲಿ ಡಾಕ್ಯುಮೆಂಟ್ ಮೂವ್ ಮಾಡಿದ್ದಾರೆ. ಬಡವರ ಕಣ್ಣೀರು ಒರೆಸುವಾಗ ಮಾತ್ರ ಯಾಕೆ ಇಷ್ಟು ಬೇಗ ಫೈಲ್ ಮೂವ್ ಆಗಲ್ಲ? ಇದಕ್ಕೆ ರಾಜಕೀಯ ಪ್ರೇರಿತ ಅಂದಿದ್ದು ಅಂತ ಬಿಜೆಪಿ‌ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ: ಬಿಎಸ್‍ವೈ