ರಿವೀಲ್‌ ಆಯ್ತು ‘ಅಧಿಪತ್ರ’ ಸಿನಿಮಾದಲ್ಲಿನ ರೂಪೇಶ್‌ ಶೆಟ್ಟಿ ಲುಕ್‌

ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ (Roopesh Shetty) ವಿನ್ನರ್ ಆಗಿ ಗೆದ್ದು ಬೀಗಿದ್ದರು. ಇದೀಗ ತುಳು, ಕನ್ನಡ ಸಿನಿಮಾಗಳಲ್ಲಿ ರೂಪೇಶ್ ಬ್ಯುಸಿಯಾಗಿದ್ದಾರೆ. ‘ಅಧಿಪತ್ರ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿನ ರೂಪೇಶ್ ಲುಕ್ ಹೇಗಿದೆ. ಇದೀಗ ರಿವೀಲ್ ಆಗಿದೆ.

ಬಿಗ್ ಬಾಸ್ ಗೆದ್ದ ಮೇಲೆ ಹಲವು ಸಿನಿಮಾಗಳನ್ನ ರೂಪೇಶ್ ಶೆಟ್ಟಿ ಒಪ್ಪಿಕೊಂಡಿದ್ದಾರೆ. ‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಬೈಕ್ ಮೇಲೆ ಕುಳಿತು ಖಡಕ್ ಆಗಿ ಕ್ಯಾಮೆರಾ ಕಣ್ಣಿಗೆ ರೂಪೇಶ್ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

ಚಹನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಅಧಿಪತ್ರ ಚಿತ್ರದಲ್ಲಿ ಹೀರೋ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಜಾಹ್ನವಿ ನಟಿಸುತ್ತಿದ್ದಾರೆ. ಬೃಹತಿ ಎಂಬ ಪಾತ್ರಕ್ಕೆ ಗಿಚ್ಚಿ ಗಿಲಿ ಗಿಲಿ ನಟಿ ಬಣ್ಣ ಹಚ್ಚಿದ್ದಾರೆ.‌ ಸದ್ಯ ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದೆ.

ಇನ್ನೂ ನಿರ್ದೇಶಕ ಚಹನ್ ಶೆಟ್ಟಿ ಮೊದಲು ಈ ಸಿನಿಮಾದ ಕಥೆ ಹೇಳಿದಾಗ ಬಹಳ ಆಸಕ್ತಿ ಮೂಡಿಸಿತು. ಬಹಳ ಸಿದ್ಧತೆಯೊಂದಿಗೆ ಅವರು ಈ ಸಿನಿಮಾದ ಸ್ಕ್ರಿಪ್ಟ್ ಮಾಡಿಕೊಂಡು ಬಂದಿದ್ದಾರೆ. ಅವರ ಸಿದ್ಧತೆ ನೋಡಿ ನನಗೆ ಧೈರ್ಯ ಬಂತು. ಅವರಲ್ಲಿ ಒಳ್ಳೆಯ ವಿಷನ್ ಇದೆ. ಆ ಕಾರಣಕ್ಕಾಗಿಯೇ ನಾನು ಈ ‘ಅಧಿಪತ್ರ’ ಸಿನಿಮಾ ಒಪ್ಪಿಕೊಂಡಿದ್ದೇನೆ. ಇದರಲ್ಲಿ ನನ್ನ ಲುಕ್ ಕೂಡ ಬೇರೆ ಥರ ಇರಲಿದೆ ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದರು. ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದರು.