2023ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರ್‌ಡಿ ಪಾಟೀಲ್ – ಪ್ರಚಾರಕ್ಕೆ ಬಂದಿದ್ರು ಅಖಿಲೇಶ್ ಯಾದವ್

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮದ (KEA Exam Scam) ಕಿಂಗ್‌ಪಿನ್ ಆರ್‌ಡಿ ಪಾಟೀಲ್ (RD Patil) ಅಫಜಲಪುರ ಕ್ಷೇತ್ರದ ಶಾಸಕನಾಗಲು ಮುಂದಾಗಿದ್ದ ಎಂಬುದು ಬೆಳಕಿಗೆ ಬಂದಿದೆ.

2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆರ್‌ಡಿ ಪಾಟೀಲ್ ಸ್ಪರ್ಧಿಸಿದ್ದ. ಇಂಡಿಯಾ ಒಕ್ಕೂಟದ ಸಮಾಜವಾದಿ ಪಕ್ಷದಿಂದ ಆರ್‌ಡಿ ಪಾಟೀಲ್ ಸ್ಪರ್ಧಿಸಿದ್ದು, ಈತನ ಪರ ಪ್ರಚಾರಕ್ಕಾಗಿ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ಆಗಮಿಸಿದ್ದರು.

ಈಗಾಗಲೇ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಆರ್‌ಡಿ ಪಾಟೀಲ್ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನಿಗಾಗಿ ಭಾರೀ ಹುಡುಕಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಆರ್‌ಡಿ ಪಾಟೀಲ್ ಯಾದಗಿರಿಯ ಜಿಲ್ಲಾ ಕೋರ್ಟ್‌ಗೆ ಜಾಮೀನಿಗಾಗಿ ವಕೀಲರ ಮೂಲಕ ಮೊರೆ ಹೋಗಿದ್ದಾನೆ. ಯಾದಗಿರಿ ನಗರ ಠಾಣೆಯಲ್ಲಿ ದಾಖಲಾಗಿರುವ 5 ಪ್ರಕರಣಗಳ ಪೈಕಿ 4 ಪ್ರಕರಣಗಳಿಗೆ ಜಾಮೀನು ಅರ್ಜಿ ಸಲ್ಲಿಸಿದ್ದಾನೆ. ಇದನ್ನೂ ಓದಿ: ಟಿಕೆಟ್ ಕೊಡಲ್ಲ ಅಂತ ಹೈಕಮಾಂಡ್ ಹೇಳಿತ್ತು: ಸದಾನಂದಗೌಡ ನಿವೃತ್ತಿ ಘೋಷಣೆಗೆ ಬಿಎಸ್‌ವೈ ಪ್ರತಿಕ್ರಿಯೆ

ಈ ನಡುವೆ ಆರ್‌ಡಿ ಪಾಟೀಲ್ ಸೆರೆಗೆ ಇಬ್ಬರು ಎಸಿಪಿಗಳು ಫೀಲ್ಡ್‌ಗೆ ಇಳಿದಿದ್ದಾರೆ. ಎಸಿಪಿ ಭೂತೆಗೌಡ ಹಾಗೂ ಎಸಿಪಿ ರಾಜಣ್ಣ ನೇತೃತ್ವದ ತಂಡ ಮಹಾರಾಷ್ಟ್ರಕ್ಕೆ ತೆರಳಿದೆ. ಹಿರಿಯ ಅಧಿಕಾರಿಗಳಿಗೆ ಬಂದ ಮಾಹಿತಿ ಮೇಲೆ ಆರ್‌ಡಿ ಪಾಟೀಲ್ ಬಂಧನಕ್ಕಾಗಿ ಎಸಿಪಿಗಳು ಮಹಾರಾಷ್ಟ್ರಕ್ಕೆ ತೆರಳಿದ್ದು, ಆಪರೇಷನ್ ಮಿಡ್ ನೈಟ್ ಕಾರ್ಯಾಚರಣೆ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್