ಗಾಜಾದಲ್ಲಿ ಮುಗ್ಧ ಕಂದಮ್ಮಗಳು ಜೀವ ಕಳೆದುಕೊಳ್ಳುತ್ತಿವೆ: ಇರ್ಫಾನ್‌ ಪಠಾಣ್‌ ಬೇಸರ

– ಇಸ್ರೇಲ್‌-ಹಮಾಸ್‌ ಸಂಘರ್ಷ ಕೊನೆಗೊಳಿಸಲು ಮಾಜಿ ಕ್ರಿಕೆಟಿಗ ಆಗ್ರಹ

ನವದೆಹಲಿ: ಇಸ್ರೇಲ್‌-ಹಮಾಸ್‌ (Israel-Hamas) ಯುದ್ಧದ ಭೀಕರತೆಯಿಂದ ಆಗುತ್ತಿರುವ ಪರಿಣಾಮದ ಕುರಿತು ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಇರ್ಫಾನ್‌ ಪಠಾಣ್‌ (Irfan Pathan) ಪ್ರತಿಕ್ರಿಯಿಸಿದ್ದಾರೆ. ಯುದ್ಧದಲ್ಲಿ ಪುಟ್ಟ ಮಕ್ಕಳ ಸಾವಿಗೆ ಮರುಕ ವ್ಯಕ್ತಪಡಿಸಿದ್ದಾರೆ.

ಗಾಜಾದಲ್ಲಿ (Gaza) ನವಜಾತ ಶಿಶುಗಳು, ಪುಟ್ಟ ಪುಟ್ಟ ಮುಗ್ಧ ಮಕ್ಕಳ ಹತ್ಯೆಯಾಗುತ್ತಿರುವ ಬಗ್ಗೆ ಮಾಜಿ ಆಲ್‌ರೌಂಡರ್‌ ಪಠಾಣ್‌ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ವಿಶ್ವ ನಾಯಕರು ಒಟ್ಟಾಗಿ ಈ ಸಂಘರ್ಷವನ್ನು ಕೊನೆಗಾಣಿಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜರ್ಮನಿಯಲ್ಲಿ ಹಮಾಸ್‌ ಚಟುವಟಿಕೆಗೆ ಸಂಪೂರ್ಣ ನಿಷೇಧ

‘ಗಾಜಾದಲ್ಲಿ ಪ್ರತಿದಿನ 0-10 ವರ್ಷ ವಯಸ್ಸಿನ ಮುಗ್ಧ ಮಕ್ಕಳು ಜೀವ ಕಳೆದುಕೊಳ್ಳುತ್ತಿವೆ. ಆದರೆ ಜಗತ್ತು ಮೌನವಾಗಿದೆ. ಒಬ್ಬ ಕ್ರೀಡಾಪಟುವಾಗಿ ನಾನು ಮಾತ್ರ ಮಾತನಾಡಬಲ್ಲೆ. ಆದರೆ ವಿಶ್ವ ನಾಯಕರು ಒಂದಾಗಿ ಈ ಮತಿಗೇಡಿ ಹತ್ಯೆಯನ್ನು ಕೊನೆಗಾಣಿಸಲು ಇದು ಸಕಾಲ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇರ್ಫಾನ್‌ ಪೋಸ್ಟ್‌ ಮಾಡಿದ್ದಾರೆ.

ಇಸ್ರೇಲ್ ಗಾಜಾದ ಉತ್ತರದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದೆ. ಈ ದಾಳಿಯಿಂದ ನೂರಾರು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನಿಯನ್‌ ಅಧಿಕಾರಿಗಳು ತಿಳಿಸಿದ್ದಾರೆ. ಜಬಾಲಿಯಾ ಶಿಬಿರದ ಮೇಲಿನ ದಾಳಿಯನ್ನು ಅರಬ್ ಸರ್ಕಾರಗಳು ಬಲವಾಗಿ ಖಂಡಿಸಿವೆ. ಆದರೆ ಈ ಭಾಗವನ್ನು ಹಮಾಸ್ ತನ್ನ ತರಬೇತಿ ಕೇಂದ್ರವಾಗಿ ಬಳಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ – 195 ಮಂದಿ ಸಾವು

ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಶುಕ್ರವಾರ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಯುದ್ಧದಿಂದಾಗಿ ಗಾಜಾದಲ್ಲಿನ ನಾಗರಿಕರಿಗೆ ಆಗಿರುವ ಅಪಾರ ಪ್ರಮಾಣದ ಹಾನಿಯನ್ನು ತಗ್ಗಿಸಲು ಕ್ರಮಕೈಗೊಳ್ಳುವ ಉದ್ದೇಶದಿಂದ ಈ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]