ಕಾವೇರಿ ನೀರು ವಿಚಾರವಾಗಿ ತಮಿಳುನಾಡಿನಲ್ಲಿ ರೈತರ ಪ್ರತಿಭಟನೆ- 8 ಜಿಲ್ಲೆಗಳಲ್ಲಿ ಬಂದ್‌ಗೆ ಕರೆ

ಚೆನ್ನೈ: ಅಸಮರ್ಪಕ ನೀರು ಪೂರೈಕೆಯಿಂದ ಬೆಳೆ ಹಾನಿಯನ್ನು ವಿರೋಧಿಸಿ ತಮಿಳುನಾಡಿನ (Tamil Nadu) ರೈತರು (Farmers) ಬುಧವಾರ ಎಂಟು ಜಿಲ್ಲೆಗಳಲ್ಲಿ ಬಂದ್‌ಗೆ (Bandh) ಕರೆ ಕೊಟ್ಟಿದ್ದಾರೆ.

ತಮ್ಮ ಪ್ರತಿಭಟನೆಯ (Protest) ಮೂಲಕ ತಮಿಳುನಾಡಿಗೆ ಸಾಕಷ್ಟು ಪ್ರಮಾಣದ ಕಾವೇರಿ ನೀರು (Cauvery Water) ಬಿಡುವಂತೆ ರೈತರು ಒತ್ತಾಯಿಸಿದ್ದಾರೆ. ಅಲ್ಲದೇ ರೈತರ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಬಿಜೆಪಿ ವಿರುದ್ಧವೂ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾಂದೆಡ್ ಆಸ್ಪತ್ರೆಯಲ್ಲಿ 8 ದಿನಗಳಲ್ಲಿ 108 ಮಂದಿ ದುರ್ಮರಣ!

ಬಂದ್‌ಗೆ ಸ್ಪಂದಿಸಿ ತಂಜಾವೂರು, ತಿರುಚ್ಚಿ, ತಿರುವರೂರ್, ನಾಗಪಟ್ಟಿಣಂ, ಪುದುಕೊಟ್ಟೈ, ಮೈಲಾಡುತುರೈ, ಕಡಲೂರು ಮತ್ತು ಅರಿಯಲೂರು ಸೇರದಂತೆ ಎಂಟು ಜಿಲ್ಲೆಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ. ಇದನ್ನೂ ಓದಿ: ಇಸ್ರೇಲ್, ಹಮಾಸ್ ಸಂಘರ್ಷ- ಭಾರತದ ಆರ್ಥಿಕ ಕಾರಿಡಾರ್ ಯೋಜನೆಗೆ ಯುದ್ಧದ ಕಾರ್ಮೋಡ

ಕರ್ನಾಟಕ ಸರ್ಕಾರ ನೀರಾವರಿಗೆ ಸಮರ್ಪಕ ನೀರು ಬಿಡದಿರುವುದನ್ನು ವಿರೋಧಿಸಿ ಕಾವೇರಿ ಡೆಲ್ಟಾ ರಕ್ಷಣಾ ಆಂದೋಲನ ಬುಧವಾರ ತಮಿಳುನಾಡಿನ ತಿರುವಾರೂರು ಬಂದ್‌ಗೆ ಕರೆ ನೀಡಿದೆ. ಬಂದ್‌ಗೆ ರಾಜ್ಯದ ಹಲವು ರೈತ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ. ನಾಗಪಟ್ಟಣಂನಲ್ಲಿಯೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಇದನ್ನೂ ಓದಿ: ಜಾತಿ, ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ: ಮಂತ್ರಿ ಸ್ಥಾನಕ್ಕೆ ದಲಿತ ನಾಯಕಿ ರಾಜೀನಾಮೆ

ಕಾವೇರಿ ನೀರು ನಿರ್ವಹಣಾ ಸಮಿತಿ ಅ.15ರವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಆದೇಶ ನೀಡಿತ್ತು. ಇದಾಗಿಯೂ ಕರ್ನಾಟಕದಲ್ಲಿ ರೈತರು ಕಾವೇರಿ ನೀರು ಹರಿಸದಂತೆ ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ. ಇದಕ್ಕೂ ಮುನ್ನ ಕಾವೇರಿ ರೈತ ಸಂರಕ್ಷಣಾ ಸಂಘದ ಕಾರ್ಯಕರ್ತರು ಅಕ್ಟೋಬರ್ 2 ರಂದು ನಾಗಪಟ್ಟಣದ ಕಿಲ್ವೇಲೂರು ರೈಲು ನಿಲ್ದಾಣದ ಬಳಿ ರೈಲು ರೋಕೋ ಪ್ರತಿಭಟನೆ ನಡೆಸಲು ಯತ್ನಿಸಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನಾಳೆ CWRC ಸಭೆ – ಈ ಬಾರಿ ತಮಿಳುನಾಡು ಬೇಡಿಕೆಯಿಟ್ಟ ನೀರಿನ ಪ್ರಮಾಣ ಎಷ್ಟು ಗೊತ್ತಾ?

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]