ಬಿಟ್‌ಕಾಯಿನ್‌ ಪ್ರಕರಣ – ಪಂಜಾಬ್‌ ಮೂಲದ ಅಂತಾರಾಷ್ಟ್ರೀಯ ಹ್ಯಾಕರ್‌ ಬಂಧನ

ಬೆಂಗಳೂರು: ಬಿಟ್‌ಕಾಯಿನ್ (Bitcoin) ಹಗರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ನನ್ನು ಬಂಧಿಸಲಾಗಿದೆ.

ಪಂಜಾಬ್ ಮೂಲದ ನಟೋರಿಯಸ್ ಹ್ಯಾಕರ್ ರಾಜೇಂದ್ರ ಸಿಂಗ್ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ. ಶ್ರೀಕಿಗೂ ಮುನ್ನವೇ ಹ್ಯಾಕಿಂಗ್‌ನಲ್ಲಿ ಈತ ಕೈಚಳಕ ತೋರಿ ಭೂಗತವಾಗಿದ್ದ. ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ಹ್ಯಾಕರ್ ರಾಜೇಂದ್ರ ಸಿಂಗ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಆಟವಾಡುತ್ತಾ ಬಾವಿಗೆ ಬಿದ್ದು ಮಗು ಸಾವು

ಸರ್ಕಾರಿ ಹಾಗೂ ಖಾಸಗಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದ. ಈತನಿಗಾಗಿ ನಾಲ್ಕು ವರ್ಷಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಹುಡುಕಾಟ ನಡೆಸಿದ್ದವು. ಸಿಸಿಬಿ ಅಧಿಕಾರಿಗಳು ಶ್ರೀಕಿಯಿಂದ ಸುಮಾರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆಯಲ್ಲಿ ಪಂಜಾಬ್‌ನ ರಾಜೇಂದ್ರ ಸಿಂಗ್ ಹೆಸರು ಕೇಳಿಬಂದಿತ್ತು.

ಆದ್ದರಿಂದ ರಾಜೇಂದ್ರ ಸಿಂಗ್ ಬಂಧನಕ್ಕೆ ಬಲೆ ಬೀಸಲಾಗಿತ್ತು. ಈತನನ್ನು ಪಂಜಾಬ್‌ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ರಾಜೇಂದ್ರ ಸಿಂಗ್ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಮೇಘಸ್ಫೋಟ – 10 ಸಾವು, 82 ಜನ ನಾಪತ್ತೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]