ಯುವತಿಯನ್ನು ಹಿಂಬಾಲಿಸಿ ಮುತ್ತಿಟ್ಟು ಎಸ್ಕೇಪ್ – ಬೆಂಗಳೂರಿನ ಬೀದಿ ಕಾಮುಕ ಅರೆಸ್ಟ್

ಬೆಂಗಳೂರು: ವಿಚಿತ್ರ ಬೀದಿ ಕಾಮುಕನನ್ನು (Amorous) ಹೈಗ್ರೌಂಡ್ ಪೊಲೀಸರು (High Ground Police) ಬಂಧಿಸಿ ಜೈಲಿಗೆ ಕಳುಹಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಆರೋಪಿ ವೃತ್ತಿಯಲ್ಲಿ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ. ಅಂತಾರಾಜ್ಯದ ಯುವತಿಯೊಬ್ಬರು ವಸಂತ ನಗರ ಪಿಜಿಯಲ್ಲಿ ಇದ್ದುಕೊಂಡು ಎಂಬಿಎ ಓದುತ್ತಿದ್ದರು. ಯುವತಿ (Young Woman) ನಿತ್ಯ ಪಿಜಿಯಿಂದ ಕಾಲೇಜಿಗೆ ಹೋಗುವಾಗ, ಮುಂಜಾನೆ ವಾಕಿಂಗ್ ಹೋಗುವಾಗ ಆರೋಪಿ ಹಿಂಬಾಲಿಸಿಕೊಂಡು ಹೋಗಿ ಹಿಂಬದಿಗೆ ಹೊಡೆದು, ತಬ್ಬಿಕೊಂಡು ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ. ಆರೋಪಿಯ ಕಿರುಕುಳ (Harassment) ತಾಳಲಾರದೆ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅಪಮಾನ – ಮುಸ್ಲಿಂ ಯುವಕನ ಬಂಧನ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ಮಾಡಿದಾಗ ಯುವತಿಗೆ ಕಿರುಕುಳ ಕೊಡುತ್ತಿದ್ದರ ಹಿಂದಿನ ಕಾರಣ ಬಹಿರಂಗವಾಗಿದೆ. ಯುವತಿಯನ್ನು ಪ್ರೀತಿ ಮಾಡುವ ಉದ್ದೇಶದಿಂದ ನಿತ್ಯ ಹಿಂದೆ ಹೋಗಿ ಇಂಪ್ರೆಸ್ ಮಾಡೋದಕ್ಕೆ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದೆ ಎಂದು ಆರೋಪಿ ಪೊಲೀಸರ ತನಿಖೆಯ ವೇಳೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: 84 ಬ್ಯಾಂಕ್ ಅಕೌಂಟ್, 854 ಕೋಟಿ ವಹಿವಾಟು – ಬೃಹತ್ ಸೈಬರ್ ಕ್ರೈಂ ಜಾಲ ಬೆಳಕಿಗೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]