Animal Teaser: ಕ್ಲಾಸ್‌, ಮಾಸ್ ಅವತಾರದಲ್ಲಿ ರಣ್‌ಬೀರ್ ಕಪೂರ್ ಎಂಟ್ರಿ

ಬಾಲಿವುಡ್ ನಟ ರಣ್‌ಬೀರ್ ಕಪೂರ್‌ಗೆ ಇಂದು (ಸೆ.28) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ‘ಅನಿಮಲ್’ ಟೀಸರ್ ರಿಲೀಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗಿಫ್ಟ್ ಕೊಟ್ಟಿದ್ದಾರೆ. ಸಾಮಾನ್ಯ ಹುಡುಗ ಅನಿಮಲ್ ಆಗುವ ಕಥೆಯ ಸಣ್ಣ ತುಣುಕನ್ನ ಚಿತ್ರತಂಡ ರಿವೀಲ್ ಮಾಡಿದೆ.

‘ಅನಿಮಲ್'(Animal) ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ರಣ್‌ಬೀರ್ ಕಪೂರ್ (Ranbir Kapoor) ಕಾಣಿಸಿಕೊಂಡಿದ್ದಾರೆ. ಸಿಂಪಲ್ & ರಗಡ್ ಲುಕ್‌ನಲ್ಲಿ ನಟ ಕಾಣಿಸಿಕೊಂಡಿದ್ದರೆ, ರಶ್ಮಿಕಾ ಮಂದಣ್ಣ (Rashmika Mandanna) ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿ ಅನಿಮಲ್ ಆದರೆ ಹೇಗಿರುತ್ತೆ ಎಂದು ವಿವರಿಸುವ ರೀತಿಯಲ್ಲಿ ಟೀಸರ್ ಮೂಡಿ ಬಂದಿದೆ. ಇದನ್ನೂ ಓದಿ:ನಿಮ್ಮನ್ನು ಪತಿಯಾಗಿ ಪಡೆಯಲು ಪುಣ್ಯ ಮಾಡಿದ್ದೇನೆ- ತೇಜಸ್ವಿನಿ ಪ್ರಕಾಶ್

ರಣ್‌ಬೀರ್ ಕಪೂರ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೈ ನವಿರೇಳಿಸುವಂತಿದೆ ಆ್ಯಕ್ಷನ್ ಸೀನ್ಸ್‌ಗಳು, ಅತಿಯಾದ ರಕ್ತವನ್ನು ತೋರಿಸಲಾಗಿದೆ.

‘ಅರ್ಜುನ್ ರೆಡ್ಡಿ’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಡೈರೆಕ್ಷನ್‌ನಲ್ಲಿ ಅನಿಮಲ್ (Animal) ಸಿನಿಮಾ ಮೂಡಿ ಬಂದಿದ್ದು, ಡಿಸೆಂಬರ್ 1ರಂದು ಬಹುಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]