ಬಿಜೆಪಿ ನಾಯಕನಿಂದ ನಿಂದನೆಗೊಳಗಾದ ಸಂಸದರನ್ನು ರಾಹುಲ್ ಗಾಂಧಿ ಭೇಟಿ

– ಈಗ ನಾನು ಒಬ್ಬಂಟಿಯಲ್ಲ ಅಂದ್ರು ಡ್ಯಾನಿಶ್ ಅಲಿ

ನವದೆಹಲಿ: ಬಿಜೆಪಿ ನಾಯಕ, ಸಂಸದ ರಮೇಶ್ ಬಿಧುರಿಯಿಂದ (Ramesh Bidhuri) ನಿಂದನೆಗೊಳಗಾದ ಬಹುಜನ ಸಮಾಜ ಪಕ್ಷದ (BSP) ಸಂಸದ ಡ್ಯಾನಿಶ್ ಅಲಿಯನ್ನು (Danish Ali) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ.

ಡ್ಯಾನಿಶ್ ಅಲಿಯನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಹುಲ್ (Rahul Gandhi), ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಎಂದು ಹೇಳಿದ್ದಾರೆ. ರಾಹುಲ್‍ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ಸಂಸದ ಇಮ್ರಾನ್ ಪ್ರತಾಪಗಢಿ ಸಾಥ್ ನೀಡಿದ್ದಾರೆ.

ಇತ್ತ ಭೇಟಿ ಬಳಿಕ ಡ್ಯಾನಿಶ್ ಅಲಿ ಮಾತನಾಡಿ, ರಾಹುಲ್ ಗಾಂಧಿ ಭೇಟಿ ಬಳಿಕ ನಾನು ಒಂಟಿಯಲ್ಲ ಎಂಬುದು ಮನವರಿಕೆಯಾಯ್ತು. ರಾಹುಲ್ ಗಾಂಧಿಯವರು ಬಂದು ನನ್ನ ಜೊತೆ ಮಾತುಕತೆ ನಡೆಸುವ ಮೂಲಕ ನನಗೆ ಧೈರ್ಯ ತುಂಬಿದರು. ಆಗಿದ್ದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ, ಅದರ ಕಡೆ ಹೆಚ್ಚಿನ ಗಮನವನ್ನೂ ಕೊಡಬೇಡಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಎಂದು ಧೈರ್ಯದ ಮಾತುಗಳನ್ನಾಡಿದರು. ಹೀಗಾಗಿ ಒಬ್ಬಂಟಿ ಎಂದು ಈಗ ನನಗನಿಸುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್‌ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ

ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿಯಾಗಿದೆ. ಇದೀಗ ಅಮೃತಕಾಲದಲ್ಲಿ ಹೊಸ ಸಂಸತ್ತಿನಲ್ಲಿ ದ್ವೇಷದ ಅಂಗಡಿಗಳು ಬೀದಿಗಿಳಿದಿರುವುದು ವಿಷಾದನೀಯ, ಲೋಕಸಭೆಯೇ ನಮ್ಮ ರಕ್ಷಕ ಎಂದು ಡ್ಯಾನಿಶ್ ಹೇಳಿದರು. ಇತ್ತ ರಾಹುಲ್ ಗಾಂಧಿ ಫೋಟೋ ಸಮೇತ ‘ಎಕ್ಸ್’ ನಲ್ಲಿ ಅಪ್ಲೋಡ್ ಮಾಡಿ, ರಮೇಶ್ ಬಿಧುರಿ ಸಂಸತ್‍ನಲ್ಲಿ ನಾಚಿಗೇಡಿನ ವರ್ತನೆ ತೋರಿದ್ದಾರೆ. ಈ ಮೂಲಕ ಅವರು ಸದನದ ಘನತೆಗೆ ಕಳಂಕ ತಂದಿದ್ದಾರೆ. ಪ್ರಜಾಪ್ರಭುತ್ವದ ದೇವಾಲಯದಲ್ಲಿ ಇಂತಹ ದ್ವೇಷ ಮತ್ತು ದ್ವೇಷದ ಮನಸ್ಥಿತಿಯನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ನಡೆದಿದ್ದೇನು..?: ಲೋಕಸಭೆಯಲ್ಲಿ (Loksabha) ಚಂದ್ರಯಾನದ ಯಶಸ್ಸು ಕುರಿತು ಚರ್ಚೆಯ ಸಂದರ್ಭದಲ್ಲಿ ರಮೇಶ್ ಬಿಧುರಿಯವರು ಡ್ಯಾನಿಶ್ ಅಲಿಯನ್ನು ಮುಲ್ಲಾ, ಭಯೋತ್ಪಾದಕ ಎಂದು ಕರೆಯುವ ಮೂಲಕ ನಿಂದಿಸಿದ್ದಾರೆ. ರಮೇಶ್ ಬಿಧುರಿ ಹೇಳಿಕೆಯ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಸಿಟ್ಟಾಗಿದ್ದು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]