ಪಾಕ್‌ ಜೊತೆ ಭಾರತೀಯ ಸೇನೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್‌

ಚಂಡೀಗಢ: ಭಾರತೀಯ ಸೇನೆಗೆ (Indian Army) ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ (Pakistan) ಜೊತೆ ಹಂಚಿಕೊಳ್ಳುತ್ತಿದ್ದ ಯೋಧನನ್ನು ಪಂಜಾಬ್‌ ಪೊಲೀಸರು (Punjab Police) ಬಂಧಿಸಿದ್ದಾರೆ.

ವೆಸ್ಟರ್ನ್ ಕಮಾಂಡ್‌ನ ಚಂಡಿಮಂದಿರ್ ಪ್ರಧಾನ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸೇನಾ ಯೋಧನನ್ನು ಪಂಜಾಬ್ ಪೊಲೀಸರು ಡ್ರಗ್ ಡೀಲರ್ ಮೂಲಕ ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ) ಗೆ ರವಾನಿಸಿದ ಆರೋಪದ ಮೇಲೆ ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ

ಆರೋಪಿ ಭೋಪಾಲ್ ಮೂಲದ ಮನ್‌ಪ್ರೀತ್ ಶರ್ಮಾ ಎಂದು ಗುರುತಿಸಲಾಗಿದೆ. ಮೇ 2022 ರಲ್ಲಿ ಪಟಿಯಾಲಾದಿಂದ ಅಮರಿಕ್ ಸಿಂಗ್ ಎಂಬ ಮಾದಕವಸ್ತು ವ್ಯಾಪಾರಿಯನ್ನು ಬಂಧಿಸಿದ ನಂತರ ಈತನ ವಿಚಾರ ಬೆಳಕಿಗೆ ಬಂದಿದೆ.

ಅಮರಿಕ್ ಎಂಬ ಮಾದಕವಸ್ತು ಕಳ್ಳಸಾಗಣೆದಾರನನ್ನು ನಾವು ಬಂಧಿಸಿದ್ದೇವೆ. ಆತನ ಫೋನ್‌ನಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ವಿಚಾರಣೆ ವೇಳೆ ಮನ್‌ಪ್ರೀತ್ ಶರ್ಮಾ ಎಂಬ ಯೋಧನಿಂದ ಈ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾನೆ. ನಮ್ಮ ತಂಡವು ಮಧ್ಯಪ್ರದೇಶದ ಭೋಪಾಲ್‌ನಿಂದ ಆತನನ್ನು ಬಂಧಿಸಿದೆ. ಪಾಕಿಸ್ತಾನದೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 1ರಿಂದ ಜನನ ಪ್ರಮಾಣ ಪತ್ರ ಕಡ್ಡಾಯ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]