ಅಣ್ಣ ಚಿರು ಸಮಾಧಿ ಬಳಿ ನಿದ್ದೆ ಮಾಡಿದ ಧ್ರುವ ಸರ್ಜಾ

ಸ್ಯಾಂಡಲ್‌ವುಡ್ (Sandalwood) ನಟ ಧ್ರುವ ಸರ್ಜಾ ಅವರು ಅಣ್ಣ ಚಿರು ಸಮಾಧಿ ಬಳಿ ನಿದ್ದೆ ಮಾಡಿದ್ದು, ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಸಹೋದರ ಚಿರು ಜೊತೆ ಧ್ರುವಗೆ ಉತ್ತಮ ಒಡನಾಟವಿತ್ತು. ಇಬ್ಬರು ಸದಾ ಜೊತೆಯಾಗಿ ಇರುತ್ತಿದ್ದರು. ಚಿರು ಅಗಲಿರುವ ಶಾಕ್‌ನಿಂದ ಸರ್ಜಾ ಕುಟುಂಬ ಇನ್ನೂ ಹೊರಬಂದಿಲ್ಲ.  ಅವರ ಅಗಲಿಕೆಯ ನೋವು ಧ್ರುವ ಇಂದಿಗೂ ಕಾಡುತ್ತಿದೆ ಎಂಬುದಕ್ಕೆ ಚಿರು ಸಮಾಧಿ ಬಳಿ ನಟ ನಿದ್ರೆ ಮಾಡಿರುವ ವಿಡಿಯೋ ಸಾಕ್ಷಿಯಾಗಿದೆ.

ನೆಲಗುಳಿ ಧ್ರುವ ಸರ್ಜಾ (Dhruva Sarja) ಫಾರ್ಮ್ ಹೌಸ್ ಚಿರು (Chiru Sarja) ಸಮಾಧಿಗೆ ನಟ ಭೇಟಿ ಕೊಟ್ಟಿದ್ದಾರೆ. ದಿಂಬು ಹಿಡಿದುಕೊಂಡು ಬೆಡ್‌ಶೀಟ್ ಹೊದ್ದು ಮಲಗಿದ್ದ ನಟ ಪಕ್ಕದಲ್ಲಿಯೇ ಫೋನ್ ಇದೆ. ಚಿರು ಸಮಾಧಿಗೆ ಹೂವಿನಿಂದ ಅಲಂಕಾರ ಮಾಡಲಾಗಿದೆ. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ (Rajamartanda) ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಧ್ರುವ ಹುಟ್ಟುಹಬ್ಬ ಅಕ್ಟೋಬರ್ 6ರಂದು ರಾಜಮಾರ್ತಾಂಡ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಚಿರು ಜ್ಯೂನಿಯರ್‌ ರಾಯನ್‌ ರಾಜ್‌ ಸರ್ಜಾ ಕೂಡ ನಟಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗೆ ಚಿರು ಪುತ್ರನ ಎಂಟ್ರಿಯಾಗುತ್ತಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]