Kushi ಸಿನಿಮಾ ಸಕ್ಸಸ್, ವಿಜಯ್ ದೇವರಕೊಂಡ ಟೆಂಪಲ್ ರನ್

‘ಲೈಗರ್’ (Liger) ಸಿನಿಮಾ ಸೋಲಿನಿಂದ ಬೇಸತ್ತ ವಿಜಯ್ ದೇವರಕೊಂಡಗೆ ಈಗ ಬ್ರೇಕ್ ಸಿಕ್ಕಿದೆ. ‘ಖುಷಿ’ (Kushi Film) ಸಿನಿಮಾದ ಸಕ್ಸಸ್ ಬೆನ್ನಲ್ಲೇ ತೆಲಂಗಾಣದ ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವರ ಸನ್ನಿಧಿಗೆ ವಿಜಯ್ ದೇವರಕೊಂಡ (Vijay Devarakonda) ಭೇಟಿ ನೀಡಿದ್ದಾರೆ.

ಸಮಂತಾ (Samantha), ವಿಜಯ್ ನಟನೆಯ ಖುಷಿ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಕೂಡ ಒಂದೊಳ್ಳೆಯ ಕಲೆಕ್ಷನ್ ಮಾಡ್ತಿದೆ. ಸೋಲಿನ ಸುಳಿಯಲ್ಲಿದ್ದ ವಿಜಯ್ ಕೆರಿಯರ್‌ಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಇದೇ ಖುಷಿಯಲ್ಲಿ ತಮ್ಮ ಫ್ಯಾಮಿಲಿ ಮತ್ತು ಖುಷಿ ಟೀಮ್ ಜೊತೆ ವಿಜಯ್ ದೇವರಕೊಂಡ ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

‘ಖುಷಿ’ ಚಿತ್ರದ ಸಕ್ಸಸ್ ಜೊತೆ ಕೆಲ ದಿನಗಳ ಹಿಂದೆ ಆನಂದ್ ದೇವರಕೊಂಡ (Anand Devarakonda) ನಟನೆಯ ಬೇಬಿ (Baby) ಸಿನಿಮಾ ಕೂಡ ಬಿಗ್ ಸಕ್ಸಸ್ ಕಂಡಿದೆ. ಆನಂದ್ ಕೂಡ ವಿಜಯ್ ಜೊತೆ ಪೂಜೆಯ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಸ್ವಾಮಿಜೀ ಅವರನ್ನ ಭೇಟಿಯಾಗಿ ವಿಜಯ್ ಕುಟುಂಬ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ:ಬಿಕಿನಿ ಫೋಟೋಶೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಸೋನು ಗೌಡ

ಅಂದಹಾಗೆ, ‘ಖುಷಿ’ ಸಿನಿಮಾ ಇದೇ ಸೆಪ್ಟೆಂಬರ್ 1ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಿದ್ದು, ಸಮಂತಾ- ವಿಜಯ್ ಕಾಂಬೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ಲವ್, ರೊಮ್ಯಾನ್ಸ್, ಜಗಳ ಎಲ್ಲವೂ ನೋಡುಗರಿಗೆ ಕಮಾಲ್ ಮಾಡಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]