ಇಸ್ರೋ ವಿಜ್ಞಾನಿಗಳ ಸಾಧನೆ ಪ್ರಕಾಶ್‌ ರಾಜ್‌ ಮುಖಕ್ಕೆ ಉಗುಳಿದಂತೆ ಆಗಿದೆ – ಮುತಾಲಿಕ್‌ ಗುಡುಗು

ಚಿಕ್ಕೋಡಿ: ಚಂದ್ರಯಾನ-3 (Chandrayaan-3) ವಿರುದ್ಧ ಹಾಗೂ ಇಸ್ರೋ ವಿಜ್ಞಾನಿಗಳ ವಿರುದ್ಧ ವ್ಯಂಗ್ಯವಾಡಿದ್ದ ಬುದ್ಧಿ ಜೀವಿಗಳು ಹಾಗೂ ನಟ ಪ್ರಕಾಶ್‌ ರಾಜ್‌ (Prakash Raj) ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ (Pramod Muthalik) ಗುಡುಗಿದ್ದಾರೆ.

ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ʻಪಬ್ಲಿಕ್ ಟಿವಿʼಯೊಂದಿಗೆ ಮಾತನಾಡಿದ ಅವರು, ಚಂದ್ರಯಾನ-3 ಯಶಸ್ಸಿಗೆ ತಿರುಪತಿ ತಿಮ್ಮಪ್ಪನ ಮೊರೆ ಹೋದ ವಿಜ್ಞಾನಿಗಳ ನಡೆಗೆ ವ್ಯಂಗ್ಯವಾಡಿದ ಬುದ್ಧಿ ಜೀವಿಗಳ ವಿರುದ್ಧ ಮುತಾಲಿಕ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುಂದಿನ ಪ್ರಾಜೆಕ್ಟ್‌ ಗಗನಯಾನಕ್ಕೂ ನಮ್ಮ ಕಂಪನಿಯಲ್ಲಿ ಬಿಡಿಭಾಗ ತಯಾರಿ: ಚಂದ್ರಯಾನ-3 ರಾಕೆಟ್‌ಗೆ ಬಿಡಿಭಾಗ ಪೂರೈಸಿದ್ದ ಬೆಳಗಾವಿ ದೀಪಕ್‌ ಮಾತು

ತಿರುಪತಿಗೆ ಹೋಗಿ ಪ್ರಾರ್ಥನೆ ಮಾಡಿದ್ದಕ್ಕೆ ವ್ಯಂಗ್ಯವಾಡಿ ನಟ ಪ್ರಕಾಶ್‌ ರಾಜ್ ಕೆಟ್ಟದಾಗಿ ಮಾತನಾಡಿದ್ದರು. ಭಾರತ ಆಸ್ತಿಕರ ನಂಬಿಕೆ ಇರುವ ಧಾರ್ಮಿಕ ಸಂಪ್ರದಾಯದ ದೇಶ. ನಿಮ್ಮಂಥವರು ಇಲ್ಲಿ ಹುಟ್ಟುಬಾರದಿತ್ತು ಚೀನಾದಲ್ಲಿ ಹುಟ್ಟಬೇಕಿತ್ತು ಅಲ್ಲಿ ನಾಸ್ತಿಕರಿದ್ದಾರೆ. ವಿಜ್ಞಾನಿಗಳ ಸಾಧನೆ ಮಾಡಿದ್ದು ಪ್ರಕಾಶ್‌ ರಾಜ್‌ ಮುಖದ ಮೇಲೆ ಉಗುಳಿದ ಹಾಗೆ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಶಾಸಕ ಅಜಯ್ ಸಿಂಗ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮನೆ ಕೆಲಸದಾತನ ಶವ ಪತ್ತೆ

ವಿಜ್ಞಾನ ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು, ದೇಹ ಮತ್ತು ಹೃದಯ ಇದ್ದ ಹಾಗೆ. ಇಂಥ ದೇಶದಲ್ಲಿ ದೇಶದ ಸಾಧನೆಯನ್ನೂ ಟೀಕೆ ಮಾಡುವಂತಹ ನಿಮ್ಮಂತಹ ಬುದ್ಧಿ ಜೀವಿಗಳು ಹುಟ್ಟಿದ್ದು ದೊಡ್ಡ ಕಳಂಕ, ಇಡೀ ಜಗತ್ತೇ ಹೆಮ್ಮೆ ಪಡುವ ವಿಜ್ಞಾನಿಗಳು ತಿರುಪತಿಗೆ ಹೋಗಿ ಬಂದ ಕಾರಣದಿಂದಲೇ ಸಾಧನೆ ಸಾಧ್ಯವಾಗಿದೆ. ವಿಜ್ಞಾನದಲ್ಲಿ ಸಿಗುವ ಫಲ ದೇವರ ಮೇಲೆ ಬಿಟ್ಟಿದ್ದು ಎಂಬುದನ್ನು ಬುದ್ಧಿಜೀವಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]