ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

ವಾಷಿಂಗ್ಟನ್: ಫೇಸ್‌ಬುಕ್ (Facebook) ಮಾತೃಸಂಸ್ಥೆ ಮೆಟಾ (Meta) ತನ್ನ ಉದ್ಯೋಗಿಗಳಿಗೆ ಆಫೀಸ್‌ಗೆ (Office) ಮರಳುವಂತೆ ಸೂಚಿಸಿದ್ದು, ಮರಳದೇ ಇದ್ದಲ್ಲಿ ಉದ್ಯೋಗಿಗಳನ್ನು ಕೆಲಸದಿಂದಲೇ ಕಿತ್ತು ಹಾಕುವುದಾಗಿ ಮೆಟಾ ಖಡಕ್ ಎಚ್ಚರಿಕೆಯನ್ನು ನೀಡಿದೆ.

ಕೋವಿಡ್ ಬಳಿಕ ಮೆಟಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅನ್ನು ಕೊನೆಗೊಳಿಸಿ ಆಫೀಸ್‌ಗೆ ಮರಳುವಂತೆ ತಿಳಿಸಿತ್ತು. ಆದರೆ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸವನ್ನು ಮುಂದುವರಿಸಲು ಆದ್ಯತೆ ನೀಡಿದ್ದಾರೆ. ಇದೀಗ ರಿಟರ್ನ್ ಟು ಆಫೀಸ್ (RTO) ನೀತಿಯ ಮೇಲೆ ಮೆಟಾ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.

ಈ ಬಗ್ಗೆ ಮೆಟಾದ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಲೋರಿ ಗೋಲರ್ ಕಂಪನಿಯಲ್ಲಿ ಆರ್‌ಟಿಒ ಕುರಿತಾಗಿ ಉದ್ಯೋಗಳಿಗೆ ಇ-ಮೇಲ್ ಕಳುಹಿಸಿದ್ದಾರೆ. ಹೊಸ ನೀತಿಯಂತೆ ಕಂಪನಿಯ ಉದ್ಯೋಗಿಗಳು ನಿಯೋಜಿಸಲಾದ ಕಚೇರಿಯಿಂದಲೇ ಕೆಲಸ ಮಾಡಬೇಕು ಅಥವಾ ವಾರಕ್ಕೆ ಕನಿಷ್ಠ 3 ದಿನವಾದರೂ ಕಚೇರಿಯಲ್ಲಿ ಹಾಜರಿರಬೇಕು. ಆದರೆ ಈಗಾಗಲೇ ಮನೆಯಿಂದ ಕೆಲಸ ಮಾಡಲು ಅನುಮೋದನೆ ನೀಡಲಾಗಿರುವ ಉದ್ಯೋಗಿಗಳಿಗೆ ಈ ನೀತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇಡ್‌ ಇನ್‌ ಚೈನಾಗೆ ಭಾರತ ಶಾಕ್‌!

ಆರ್‌ಟಿಒ ನೀತಿ ಸೆಪ್ಟೆಂಬರ್ 5 ರಿಂದ ಜಾರಿಗೆ ಬರಲಿದೆ. ಇತರ ಕಂಪನಿಗಳಂತೆ ಈ ನೀತಿಯನ್ನು ಉದ್ಯೋಗಿಗಳು ಉಲ್ಲಂಘನೆ ಮಾಡಿದ್ದಲ್ಲಿ ಅವರ ಮೇಲೆ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಕಂಪನಿಯ ಕೆಲಸವೂ ಕೂಡಾ ಭವಿಷ್ಯದಲ್ಲಿ ತಂತ್ರಜ್ಞಾನ ಬೆಳೆದಂತೆ ಸುಧಾರಿಸುತ್ತದೆ ಎಂಬ ಭರವಸೆಯಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

ಈ ಹಿಂದೆ ಟ್ವಿಟ್ಟರ್ ಸೇರಿದಂತೆ ಹಲವು ಕಂಪನಿಗಳು ಕೂಡಾ ತನ್ನ ಉದ್ಯೋಗಿಗಳನ್ನು ಕಚೇರಿಗಳಿಗೆ ಮರಳುವಂತೆ ಎಚ್ಚರಿಕೆಯನ್ನು ನೀಡಿದ್ದವು. ಈಗ ಎಕ್ಸ್ ಆಗಿ ಬದಲಾಗಿರುವ ಟ್ವಿಟ್ಟರ್ ಅನ್ನು ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಂಡ ಬಳಿಕ ಉದ್ಯೋಗಿಗಳಿಗೆ ವಾರಕ್ಕೆ 40 ಗಂಟೆ ಕಚೇರಿಯಲ್ಲಿ ಹಾಜರಿರುವಂತೆ ತಿಳಿಸಲಾಗಿತ್ತು. ಒಂದು ವೇಳೆ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಕೊನೆಗೊಳಿಸಿ ಕಚೇರಿಗೆ ಮರಳಲು ಇಷ್ಟಪಡದೇ ಹೋದರೆ ಅವರು ದಾರಾಳವಾಗಿ ರಾಜೀನಾಮೆ ಸಲ್ಲಿಸಬಹುದು ಎಂದು ಮಸ್ಕ್ ಹೇಳಿದ್ದರು. ಇದನ್ನೂ ಓದಿ: ಸಿಮ್‌ ಕಾರ್ಡ್‌ ಡೀಲರ್‌ಗಳ ಪೊಲೀಸ್‌ ಪರಿಶೀಲನೆ ಕಡ್ಡಾಯ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]